ಸ್ಮಶಾನ ಪ್ರಶಾಂತವಾಗಿರಲು ಕಾರಣ.
ಇಲ್ಲಿ ಮನುಷ್ಯನ
ಅಹಂಕಾರ ಮೌನವಾಗಿರುತ್ತದೆ.
ಸೋತ ಅನುಭವದಂತಿದೆ. ಉತ್ಸಾಹವೆಲ್ಲ ನೆಲಕಚ್ಚಿ ಬೇಸರದ ಮನೆ ಕಟ್ಟಿ ಸ್ಮಶಾನ ಮೌನದಂತಿದೆ.
ಊರಿಗೊಂದೇ ಸ್ಮಶಾನ
ಊರಿಗೊಂದೇ
ಸ್ಮಶಾನವಂತೆ
ಬೀದಿಯಲ್ಲಿ
ಸುಡುತ್ತಿರುವ
ಹೆಣಗಳ ತಕರಾರು…!
**
ಹುಯಿಲಿಟ್ಟಿತೋ ಚಿತೆ
ಮುಕ್ತಿ ಕಾಣಲು
ಸರದಿ ಸಾಲಿನ ಚೀಟಿ..
**
ದನಿಗಳಿಗೀಗ
ಗಿಡುಗನದೇ
ಹೆದರಿಕೆಯಂತೆ…
**
ಅರ್ಧರಾತ್ರಿಗೆ
ಉರಿದ ಚಿತೆ
ಹಗಲ ಪಾಲಾಯಿತು..
**
ಶವಸಂಸ್ಕಾರವೀಗ
ವಾರ್ತಾ ಪತ್ರಿಕೆಯ
ಮೊದಲ ಪುಟದ ಸುದ್ದಿ..
**
ನೀರು ಕುಡಿಯಲು ಬಂದು
ಏಟು ತಿಂದು ಹೋದ
ಮಂದಿರದೊಳಗೆ
ಮನ ಗುನುಗತೊಡಗಿತು
ಇಳೆ ನಿಮ್ಮ ದಾನ…
ಬೆಳೆ ನಿಮ್ಮ ದಾನ..
**
ಹುಳುಕುಗಳನ್ನು
ಗೋಡೆ ಕಟ್ಟಿ ಮರೆಮಾಚಿದ
ದಶಕಗಳಿಗೆ ಮೈ ತುಂಬಾ ಬಾಯಿ..
ಎತ್ತಕಡೆ ಸಾಗಿದೆಯೋ ಪಯಣ ?
ಜೀವನದಲ್ಲಿ ನೆಮ್ಮದಿ ಇಲ್ಲ
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ….ಎತ್ತಕಡೆ ಸಾಗಿದೆಯೋ ಪಯಣ..?
ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ… ಎತ್ತಕಡೆ ಸಾಗಿದೆಯೋ ಪಯಣ ..?
ಶನಿಯ ಕಾಟವೋ…, ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ…
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ….ಎತ್ತಣದಿಂದೆತ್ತ ಸಾಗಿದೆಯೋ ಪಯಣ..?
ಹೆಮ್ಮಾರಿ
ಬಾಳಬೆಳಕಾಗಿ ಬರಲೆಂದು ಅಂದುಕೊಂಡಿದ್ದೆ
ಬಾಳಿಗೆ ಕಿಚ್ಚೊಂದು ಹಚ್ಚಿ ಬಿಟ್ಟಳು
ಜೀವನ ಬಂಗಾರವಾಗಲಿ ಅಂದುಕೊಂಡಿದ್ದೆ
ಬಂಗಾರವನ್ನೇ ಕದ್ದು ಓಡಿಹೋದಳು
ಪ್ರೀತಿಯ ಸ್ವರೂಪ ಅಂದುಕೊಂಡಿದ್ದೆ
ಪ್ರೀತಿಯ ಅರಿಯದ ಮೊಡಿ ಅವಳು
ಜನುಮ ಜನುಮದ ಸಂಗಾತಿ ಅಂದುಕೊಂಡಿದ್ದೆ
ಯಾವುದೋ ಜನುಮದ ಶತ್ರು ಅವಳು
ಮದುವೆ ಒಂದು ಪವಿತ್ರ ಬಂಧನ ಅಂದುಕೊಂಡಿದ್ದೆ
ಗಂಡನನ್ನೇ ಕೊಲ್ಲುವ ಕೊಲೆಪಾತಕಿ ಆದಳು
ಶೂನ್ಯ ಜೀವನ
ತನುವು ಕುಗ್ಗಿ
ಮನವು ಬಗ್ಗಿ
ಉಲ್ಲಾಸವೇ ಮರೆತಿದೆ.
ನಿರಸ ಜೀವ
ಕಳೆದ ಭಾವ
ಸೋತ ಅನುಭವದಂತಿದೆ.
ಉತ್ಸಾಹವೆಲ್ಲ ನೆಲಕಚ್ಚಿ
ಬೇಸರದ ಮನೆ ಕಟ್ಟಿ
ಸ್ಮಶಾನ ಮೌನದಂತಿದೆ.
ಇನ್ನೇನು ಉಳಿದಿದೆ ಜೀವನದಿ ?
ಕಣ್ಣುಗಳ ಮುಚ್ಚಿ., ಚೀರ ನಿದ್ದ್ರೆಯಲಿ…
ಮರೆಯಾಗುವಂತನಿಸಿದೆ…..!!!
ಕಂದ ನೀನಿಲ್ಲದ ಮನೆಯಲ್ಲಿ….
ಕಂದ ನೀನಿಲ್ಲದೆ ಮನೆಯಲ್ಲಿ ಬೇಸರವಾಗಿದೆ ನನಗೆ
ಮನೆಯಲ್ಲಿ ಸ್ಮಶಾನ ಮೌನ ತುಂಬಿ ತುಳುಕಿದೆ ನೀನಿಲ್ಲದೆ
ದಿನವೂ ನಿನ್ನ ಚೈತನ್ಯದ ಚೇಷ್ಟೆ ಕಂಡ ನನಗೆ
ಇಂದು ಮನೆಗೆ ಬಂದೊಡನೆ ವಿಷಾದ ಆವರಿಸಿದೆ ನೀನಿಲ್ಲದೆ||
ಸದಾ ಚಟ-ಪಟ ಮಾತನಾಡುತ್ತಾ ಅಮ್ಮನನ್ನು ಗೋಳು ಹೊಯ್ಕೊಳ್ಳುವ ನಿನ್ನ ಪರಿ
ಇಂದೇಕೆ ಕಾಣದಾಗಿದೆ, ಬಲು ಯೋಚಿಸುತ್ತೇನೆ ನಿನ್ನ ಬಗ್ಗೆ
ರಜೆ ಬಂದಿದೆ ನಿಜವ ಅರಿವಿದೆ, ಆದರೂ ಈ ರೀತಿಯ ಯೋಚನೆ ಸರಿ!
ನಿನ್ನ ಮೇಲಿನ ವ್ಯಾಮೋಹವಿದಲ್ಲ, ಇದು ವಾತ್ಸಲ್ಯದ ಬುಗ್ಗೆ||
ಸದಾ ಯಂತ್ರಗಳ ಯೋಚನೆ ನಿನಗೆ, ನನಗಂತೂ ಆಶ್ಚರ್ಯ!
ಎಲ್ಲಿಂದ ಬಂತು ಈ ಪರಿಯ ಯಂತ್ರಗಳ ಆಸೆ?
ಕಳ್ಳ ಕೃಷ್ಣನಂತೆ ಬಂದು ಮೊಸರು ಕುಡಿಯುವೆ
ಬೇಸರಿಸದೆ ಎಷ್ಟೊಂದು ಆಟ ಆಡುವೆ ನಿರಂತರವಾಗಿ||
ನಿಂತ ಟ್ರೈನ್ ಇಂಜಿನ್,ನಿಂತ ಗಡಿಯಾರ,ದಿಕ್ಸೂಚಿ
ಸೈಕಲ್ ಡೈನಮೋ, ನಿನ್ನ ಸ್ಪರ್ಶಕ್ಕೆ ಕಾಯುತ್ತಿರುವ ಜೈಲೋಪೋನ್
ಕಾರ್ಟೂನ್ ನೆಟ್ ವರ್ಕ್, ಪೋಗೋ ಗಳ ಹಾವಳಿಯಿಲ್ಲ
ನಿನ್ನ ಕೈತಾಕದೆ ರಿಮೋಟ್ ಧೂಳು ಹಿಡಿಯುತ್ತಿವೆ
ಬಂದು ಬಿಡು ಕಂದ ರಜಾ ಮುಗಿಸಿಕೊಂಡು ಬೇಗ||