Here is the list of ಕನ್ನಡ ಶುಭ ನುಡಿಗಳು
#1. ಕನ್ನಡ ಶುಭ ನುಡಿಗಳು
- ಉತ್ಸಾಹಿಯಾಗು ಆದರೆ ದುಡಕಬೇಡ.
- ಕರುಣೆ ತೋರಿಸು ಆದರೆ ಮೋಸ ಹೋಗಬೇಡ.
- ಶೂರನಾಗು ಆದರೆ ಕಟುಕನಾಗಬೇಡ.
- ದಾನಿಯಾಗು ಆದರೆ ದರಿದ್ರನಾಗಬೇಡ.
- ತ್ಯಾಗಿಯಾಗು ಆದರೆ ಅಡವಿಗೆ ಹೋಗಬೇಡ.
- ಉಳಿತಾಯ ಮಾಡು ಆದರೆ ಜಿಪುಣನಾಗಬೇಡ.
- ನಮ್ರತೆ ಇರಲಿ ಆದರೆ ಗುಲಾಮನಾಗಬೇಡ.
- ಲಾಭಗಳಿಸು ಆದರೆ ಲೋಭಿಯಾಗಬೇಡ.
- ಸೇವೆ ಮಾಡು ಆದರೆ ಸ್ವಾರ್ಥಿಯಾಗಬೇಡ.
- ಭಾಗ್ಯವಂತನಾಗು ಆದರೆ ಬುದ್ಧಿಹೀನನಾಗಬೇಡ.
#2. ನಮ್ಮ ಆದರ್ಶ ಮಹಿಮರು ಯಾರು? ನಾವು ಯಾರಿಂದ ಏನನ್ನು ಕಲಿಯಬೇಕು.?
- ಮಿತ್ರತ್ವವನ್ನು ಕೃಷ್ಣ ನಿಂದ.
- ಮರ್ಯಾದೆಯನ್ನು ಶ್ರೀ ರಾಮನಿಂದ.
- ಬ್ರಹ್ಮ ಚರ್ಯೆಯನ್ನು ಭೀಷ್ಮಚಾರ್ಯ ರಿಂದ.
- ಗುರುಭಕ್ತಿಯನ್ನು ಏಕಲವ್ಯನಿಂದ.
- ದಾನವನ್ನು ಕರ್ಣನಿಂದ.
- ಧರ್ಮವನ್ನು ಯುಧಿಷ್ಟರನಿಂದ.
- ಭಕ್ತಿಯನ್ನು ಪ್ರಹ್ಲಾದನಿಂದ.
- ತಪಸ್ಸನ್ನು ದ್ರುವನಿಂದ.
- ಮಾತ ಪಿತ್ರುಗಳ ಸೇವೆಯನ್ನು ಶ್ರವಣ ಕುಮಾರನಿಂದ.
- ಸ್ವಾಮಿ ನಿಷ್ಟೆಯನ್ನು ಶ್ರೀ ಆಂಜನೇಯ ಸ್ವಾಮಿಯಿಂದ.
- ತ್ಯಾಗವನ್ನು ದಧೀಚಿ ಮಹರ್ಷಿ ಯಿಂದ.
- ಪ್ರೀತಿಯನ್ನು ತಾಯಿಯಿಂದ.
- ಆದರ್ಶವನ್ನು ತಂದೆಯಿಂದ ಕಲಿಯಬೇಕು.
#3. ಸಾರ್ಥಕ ಮನುಷ್ಯನ ಒಂಬತ್ತು ಲಕ್ಷಣಗಳು
- ಆಸೆ- ಕೋಪ- ನಾಲಿಗೆ ಈ ಮೂರನ್ನು ಹತೋಟಿಯಲ್ಲಿಡು.
- ವ್ಯಾಪಾರ- ಪ್ರಯಾಣ- ಮದುವೆ ಈ ಮೂರಕ್ಕೆ ಆತುರ ಬೇಡ.
- ಬುದ್ಧಿ ಶಕ್ತಿ – ಸಾಮರ್ಥ್ಯ-ಸಂತೋಷ ಈ ಮೂರಕ್ಕೆ ಬೆಲೆ ಕೊಡು.
- ಹಣ- ಸಮಯ- ಶಕ್ತಿ ಈ ಮೂರನ್ನು ವ್ಯರ್ಥ ಮಾಡಬೇಡ.
- ಧರ್ಮ- ನ್ಯಾಯ- ವಿನಯ ಈ ಮೂರಕ್ಕೆ ಗೌರವ ಕೊಡು.
- ದೇಶ- ರಾಷ್ರ ದ್ವಜ -ಗೌರವ ಈ ಮೂರಕ್ಕೆ ಹೋರಾಡು.
- ಧೈರ್ಯ-ವಾತ್ಸಲ್ಯ-ಶಿಷ್ಟಚಾರ ಈ ಮೂರನ್ನು ಪ್ರೀತಿಸು.
- ಅನ್ಯಾಯ- ಅಹಂಕಾರ- ಸ್ವಾಮಿ ದ್ರೋಹ ಈ ಮೂರನ್ನು ದ್ವೇಷಿಸು.
- ಸಾವು-ದುಃಖ-ಸೋಲು ಈ ಮೂರಕ್ಕೆ ಸದಾ ಸಿದ್ದ ನಾಗಿರು.
Read More Kannada Quotes here