Best 25 ಯಶಸ್ಸಿನ ನುಡಿಮುತ್ತುಗಳು – Success Quotes in Kannada

Here is the list of Success Quotes in Kannada ( ಯಶಸ್ಸಿನ ನುಡಿಮುತ್ತುಗಳು)

1.

ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಹೆದರಿ ನೀ ಬದುಕಬೇಡ. ಆಡಿಕೊಳ್ಳುವವರು ಯಾರೇ ಬಂದು ನಮ್ಮ ಜೀವನವನ್ನು ನಡೆಸುವುದಿಲ್ಲ, ನಮ್ಮ ಜೀವನವನ್ನು ನಾವೇ ನಡೆಸಬೇಕು.

2.

ಅವಕಾಶ ಸಿಕ್ಕಾಗ ಮೈಮುರಿದು ದುಡಿದುಬಿಡಿ. ಯಾರಿಗೆ ಗೊತ್ತು? ಅದೃಷ್ಟ ಕೈಕೊಟ್ಟಾಗ ನೀವು ಮಾಡಿದ ಒಳ್ಳೆಯ ಕೆಲಸಗಳು ನಿಮ್ಮ ಕೈ ಹಿಡಿಯುತ್ತವೆ.

3.

ಯಾವುದನ್ನೇ ಆಗಲಿ ಅಟ್ಟಿಸಿಕೊಂಡು ಹೋಗಬೇಡ, ಆಕರ್ಷಿಸು. ಕೆಟ್ಟದ್ದನ್ನು ಅಟ್ಟಿಸಿಕೊಂಡು ಹೋಗುವುದನ್ನು ಬಿಡು; ಒಳ್ಳೆಯದು ತಂತಾನೇ ಆಕರ್ಷಿತಗೊಳ್ಳುತ್ತದೆ.

4.

ತೀರ್ಪುಗಾರ ಮೇಲಿದ್ದಾನೆ, ನಾವು ಬರೀ ಆಟಗಾರರಷ್ಟೇ, ನಮ್ಮ ಗಮನ ಏನೇ ಇದ್ರು ಆಟದ ಮೇಲೆ ಮಾತ್ರ ಇರ್ಬೇಕು.

5.

ಗೆಲ್ಲುತ್ತೇನೆ ಎಂದು ಬಂದವನು, ಸೋಲುವುದಕ್ಕೂ ಸಿದ್ಧನಿರಬೇಕು. ಅದು ಯಾರೇ ಆದರೂ ಸರಿ.

ಯಶಸ್ಸಿನ ನುಡಿಮುತ್ತುಗಳು - Success Quotes in Kannada

6.

ಒಬ್ಬ ಮನುಷ್ಯ ಬೆಳೆಯಬೇಕೆಂದರೆ, ಮಿತ್ರ ಎದೆಯಲ್ಲಿರಬೇಕು. ಶತ್ರು ಎದುರಲ್ಲಿರಬೇಕು.

7.

ಸಾಧನೆಯ ಗೆಲುವು ದುಡಿಯುವ ಕೈಗಳಿಂದ ಬರುತ್ತದೆಯೇ ಹೊರತು, ಅಂಗೈಯ ಅದೃಷ್ಟದ ರೇಖೆಗಳಿಂದಲ್ಲ.

8.

ಬೆಲೆ ಇಲ್ಲದ ಜಾಗದಲ್ಲಿ, ನೆಲೆಯಾಗಿ ನಿಲ್ಲಬೇಡ. ಸಾವಿಗೂ, ನೋವಿಗೂ, ಒಂದಕ್ಷರದ ವ್ಯತ್ಯಾಸ ಅಷ್ಟೇ. ಸಾವು ಒಂದೇ ಸಲ ಕೊಂದರೆ, ನೋವು ಪ್ರತಿಕ್ಷಣ ಕೊಲ್ಲುತ್ತದೆ.

9.

ಬದುಕು ಎನ್ನುವ ಪುಸ್ತಕದಲ್ಲಿ, ದೇವರು ಮೊದಲನೇ ಪುಟದಲ್ಲಿ ಜನನ, ಕೊನೆಯ ಪುಟದಲ್ಲಿ ಮರಣವನ್ನು ಬರೆದಿಡುತ್ತಾನೆ.. ಆದರೆ ಮದ್ಯದಲ್ಲಿ ಖಾಲಿ ಪುಟವನ್ನು ಹಾಗೆಯೇ ಬಿಟ್ಟಿರುತ್ತಾನೆ, ಏಕೆಂದರೆ ಅಲ್ಲಿ ನೋವು – ನಲಿವು ಮತ್ತು ಗೆಲುವು ನಾವೇ ಬರೆದುಕೊಳ್ಳಲೆಂದು.

10.

ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ, ಹಸಿವು ಆದಾಗ ಅನ್ನದ ಬೆಲೆ, ಕೆಲಸ ಇಲ್ಲದಿರುವಾಗ ಹಣದ ಬೆಲೆ, ದೂರವಾದಾಗ ಮನುಷ್ಯನ ಬೆಲೆ, ಸೋತಾಗ ಗೆಲುವಿನ ಬೆಲೆ ತಿಳಿಯುತ್ತದೆ.

11.

ವೈಫಲ್ಯದಿಂದ ಹಾದುಹೋಗದೆ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ.

12.

ನೀವು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿದ್ದರೆ ನೀವು ಯಾವುದೇ ಸಂದರ್ಶನದಲ್ಲಿ ಯಶಸ್ವಿಯಾಗಬಹುದು.

13.

ನೀವು ಕಳೆದುಕೊಂಡದ್ದನ್ನು ನೀವು ಮರುಪಡೆಯಲು ಸಾಧ್ಯವಿಲ್ಲ, ಆದರೆ ನೀವು ಕಳೆದುಕೊಂಡ ವಿಷಯಗಳ ಬಗ್ಗೆ ದುಃಖಿಸುವುದನ್ನು ನಿಲ್ಲಿಸಿದರೆ ಭವಿಷ್ಯದಲ್ಲಿ ನೀವು ಗೆಲ್ಲಬಹುದು.

14.

ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿದಾಗ ಮಾತ್ರ ನೀವು ಉತ್ತಮ ಫಲಿತಾಂಶಗಳನ್ನು ಹೊಂದಲು ಪ್ರಾರಂಭಿಸುತ್ತೀರಿ.

15.

ನೀವು ಉತ್ತಮರಾಗಲು ಬಯಸಿದರೆ, ಹೆಚ್ಚು ಅನುಭವಿ ಜನರಿಂದ ಸಲಹೆ ತೆಗೆದುಕೊಳ್ಳಲು ಪ್ರಾರಂಭಿಸಿ.

16.

ನೀವು ಯಾವಾಗಲೂ ಉತ್ತಮವಾಗಿರಲು ಸಾಧ್ಯವಿಲ್ಲ, ಸಮಯಗಳು ಒರಟಾಗಿರುತ್ತವೆ ನೀವು ಅದಕ್ಕೆ ಹೊಂದಿಕೊಳ್ಳಬೇಕು ಮತ್ತು ಗೆಲುವಿನತ್ತ ಮುನ್ನುಗ್ಗಬೇಕು.

17.

ಕೆಲವುಸಲ, ಜೀವನವು ನಿಮ್ಮನ್ನು ನೋಯಿಸುತ್ತದೆ ಮತ್ತು ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ ಆದರೆ ಧನಾತ್ಮಕ ಮನಸ್ಸು ನಿಮ್ಮಲ್ಲಿರಬೇಕು. ಏಕೆಂದರೆ ಒಳ್ಳೆಯದು ಸಮಯ ತೆಗೆದುಕೊಳ್ಳುತ್ತದೆ.

18.

ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

19.

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಂಡುಕೊಳ್ಳಲು, ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಬೇಕು.

20.

ಕೆಳಗೆ ಬಿದ್ದ ನಂತರ ಮತ್ತೆ ಮೇಲೇಳುವುದು ಒಂದು ರೀತಿಯ ಯಶಸ್ಸು

21.

ಜನರು ಸೋಲನ್ನು ಅನುಭವಿಸಿದರೆ ಮಾತ್ರ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ.

22.

ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿದ್ದಾಗ ಮಾತ್ರ ಬೇರೆಯವರು ನಿಮ್ಮ ಮೇಲೆ ವಿಶ್ವಾಸ ಹೊಂದುತ್ತಾರೆ.

23.

ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹಿಂದಿನದನ್ನು ಮರೆಯಲು ಪ್ರಾರಂಭಿಸಿ.

24.

ನಿಮ್ಮ ವಯಸ್ಸು ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗದಿರಲಿ.

25.

ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ, ಮನಸ್ಸು ಅಂಜುತ್ತದೆಯಷ್ಟೇ ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠ ಕಲಿಯಬಹುದು.

We hope you enjoyed reading above ಯಶಸ್ಸಿನ ನುಡಿಮುತ್ತುಗಳು (Success Quotes in Kannada )

Read More Kannada Quotes Here

 

This Kannada motivational video will change your life.