ತಂದೆ ತಾಯಿ ನಮ್ಮ ದೇವರು.! ಈ ಭೂಮಿಲ್ಲಿ ಕಣ್ಣಿಗೆ ಕಾಣಿಸುವ ಮೊದಲನೆಯ ದೇವರು “ಅಪ್ಪ-ಅಮ್ಮ”. ಈ ದೇವರಿಗೆ ನೋವು ಮಾಡಬಿಟ್ಟು, ಸಾವಿರ ದೇವಸ್ಥಾನಗಳಲ್ಲಿ ಊರಿಳು ಸೇವೆ ಮಾಡಿದ್ರು ಪೂಣ್ಯ ಸಿಗೋದಿಲ್ಲ, ಮೊದಲು ಅಪ್ಪ-ಅಮ್ಮನ ಚನ್ನಾಗಿ ನೋಡಿಕೊಳ್ಳಿ.!
#1. ತಂದೆ ತಾಯಿ ನುಡಿಮುತ್ತುಗಳು.
“ತಂದೆ” ಇರುವವರಿಗೂ ಬೆವರಿನ
ಬೆಲೆ ಗೊತ್ತಾಗುವುದಿಲ್ಲ,
“ತಾಯಿ” ಇರುವವರಿಗೆ ಹಸಿವಿನ
ಬೆಲೆ ಗೊತ್ತಾಗುವುದಿಲ್ಲ. !!
“ನಿನ್ನ ಜೀವನದಲ್ಲಿ ಈ ಇಬ್ಬರನ್ನು
ಯಾವತ್ತು ಮರೆಯಬೇಡ.
ನಿಮ್ಮ ಗೆಲುವಿಗಾಗಿ ಎಲ್ಲವನ್ನು
ಕಳೆದುಕೊಂಡ ನಿಮ್ಮ ತಂದೆ.
ನೀವು ನೋವಿನಲ್ಲಿದ್ದಾಗೆ ಪ್ರತಿಕ್ಷಣ
ನಿನ್ನ ಬೆನ್ನಲುಬಾಗಿ ನಿಂತಿರುವ ನಿಮ್ಮ ತಾಯಿ.!!”ಭೂಮಿಗಿಂತ ದೊಡ್ಡವಳು “ತಾಯಿ”.
ಗಗನಕ್ಕಿಂತ ದೊಡ್ಡವನು “ತಂದೆ”.
ತಾಯಿಯ “ಮಡಿಲು” ಹಾಗೂ ತಂದೆಯ “ಹೆಗಲು”
ಪ್ರಪಂಚಂದ ಅತ್ಯಂತ ಪವಿತ್ರ ಸ್ಥಳಗಳು.
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ
ಕೆಟ್ಟ ತಾಯಿ ಇರಲೂ ಸಾಧ್ಯವಿಲ್ಲ.!!
ತಂದೆ, ತಾಯಿ ಪ್ರತಿಯೊಬ್ಬರ ಬದುಕನ್ನು
ರೂಪಿಸುವ ಪ್ರಮುಖ ಶಕ್ತಿಗಳು.!!
“ಕಟ್ಟಿದ ಮನೆ ಹಣವಂತರಿಗೆ ಆಯಿತು,
ಬೆಳಸಿದ ಮಗಳು ಅಳಿಯನಿಗೆ ಆದಳು,
ಹರಕೆ ಹೊತ್ತು ಹೆತ್ತ ಮಗ, ನೊಸೆಯ ಪಾಲಾದ.
ವಯಸ್ಸು ಆದ ಮೇಲೆ, ಯಾರಿಗೆ ಯಾರು ಇಲ್ಲ.”
ಸ್ನೇಹಿತರೆ, ಇದು ಎಷ್ಟೋ ತಂದೆ -ತಾಯಿಂದಿರ ಗೋಳು,
ನಾವು ತಂದೆ -ತಾಯಿಂದಿರಿಗೆ ವಯಸ್ಸಾದ ಕಾಲದಲ್ಲಿ
ಮಕ್ಕಳಂತೆ ನೋಡಿಕೊಳ್ಳಬೇಕು,
ನಮಗೂ ಮುಂದೆ ಆ ಕಾಲ ಬಂದೆ ಬರುತ್ತದೆ.!”