20 Chanakya Quotes in Kannada – ಚಾಣಕ್ಯನ ನುಡಿಮುತ್ತುಗಳು

Here is the list of top 20 Chanakya Quotes in Kannada. The Indian political book, the “Arthashastra,” was written by Chanakya, who was also a teacher, philosopher, economist, and statesman (Science of Politics and Economics). His contribution to the founding of the Maurya dynasty was significant.

Chanakya, a Brahmin who was born into a lowly household, received his education in India’s historic learning centre of Takshashila, which is now in Pakistan. He was incredibly intelligent and well-versed in many fields, including astrology, economics, politics, and war tactics. He started out as a teacher before rising to the position of valued ally of Emperor Chandragupta. He served as the emperor’s advisor and assisted Chandragupta in removing the strong Nanda dynasty from Pataliputra in the Magadha region as well as in acquiring additional powers. Bindusara, the son of Chandragupta, also had Chanakya as his advisor.

20 ಚಾಣಕ್ಯನ ನುಡಿಮುತ್ತುಗಳು.

1.

ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು, ಶಕ್ತಿಶಾಲಿಗಳನ್ನಾಗಿಸಬಹುದು. ಇಲ್ಲ ದುರ್ಬಲರನ್ನಾಗಿಸಿ ಕೊಲ್ಲಬಹುದು. ಕಾಲ ಯಾರ ಕೈಯಲ್ಲು ಇಲ್ಲ. ಯಾರು ಯಾರಿಗೂ ಮಿತ್ರನೂ ಅಲ್ಲ, ಶತ್ರುನೂ ಅಲ್ಲ. ಕಾಲ ಎಲ್ಲರನ್ನೂ ಮಿತ್ರ ಶತ್ರುವನ್ನಾಗಿಸುತ್ತದೆ.

2.

“ನಾಸ್ತಿಕರಿಗೆ ಮಿತ್ರರಿರುವುದಿಲ್ಲ. ಶೂರರಿಗೆ ಸಾವಿನ ಭಯವಿರುವುದಿಲ್ಲ. ಆತ್ಮತೃಪ್ತಿಯೇ ಸಂತೋಷದ ತಾಯಿ ಬೇರು”

3.

ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವನು ಯಾವತ್ತು ಪವಿತ್ರನಾಗಿರುವುದಿಲ್ಲ. ಅವನು ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಾನೆ.

4.

ಚಿನ್ನದ ಅಸಲಿಯತ್ತನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ವ್ಯಕ್ತಿಗಳ ಮೇಲೆ ಬರುವ ಆಪಾದನೆಗಳು ಅವರ ಅಸಲಿಯತ್ತನ್ನು ಪರೀಕ್ಷಿಸುತ್ತವೆ.

5.

ಜೀವನದಲ್ಲಿ ಏನಾದರೂ ಒಂದನ್ನು ಕಲಿಯುವಾಗ, ಬ್ಯುಸಿನೆಸ್ಸ ಮಾಡುವಾಗ ಮತ್ತು ಊಟ ಮಾಡುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು.

6.

ಯಾವಾಗಲೂ ಮನೆ, ಮಡದಿ, ಮಕ್ಕಳು, ಗಳಿಕೆ, ಸಂಪತ್ತಿನ ವಿಷಯದಲ್ಲಿ ಸಾಧ್ಯವಾದಷ್ಟು ಸಂತೃಪ್ತರಾಗಿರಬೇಕು. ಆದರೆ ಜ್ಞಾನದ ವಿಚಾರದಲ್ಲಿ ಸಂತೃಷ್ಟನಾಗಿರಬಾರದು.

7.

Chanakya Quotes in Kannada

ಯೌವ್ವನ ಮತ್ತು ಸ್ತ್ರೀಯ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಶಸ್ತ್ರಗಳಾಗಿವೆ.

8.

ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸಾಯುತ್ತಾನೆ. ಅವನು ಮಾಡುವ ಕರ್ಮಗಳ ಆಧಾರದ ಮೇಲೆ ಆತ ಸುಖ ದು:ಖಗಳನ್ನು ಅನುಭವಿಸಿ ಸ್ವರ್ಗಕ್ಕೋ ಇಲ್ಲ ನರಕಕ್ಕೋ ಹೋಗುತ್ತಾನೆ.

9.

ಪ್ರತಿಯೊಂದು ಸ್ನೇಹ ಸಂಬಂಧದ ಹಿಂದೆ ಒಂದಲ್ಲ ಒಂದು ಸ್ವಾರ್ಥ ಅಡಗಿರುತ್ತದೆ. ಸ್ವಾರ್ಥವಿಲ್ಲದ ಸ್ನೇಹವಿಲ್ಲ. ಇದು ಸತ್ಯ.

10.

ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು. ಮುಂದೆ ಬರುವುದಕ್ಕಾಗಿ ಬಾಯ್ತೆರೆದು ಕೂಡಬಾರದು. ಸದ್ಯಕ್ಕಿರುವುದನ್ನು ಸರಿಯಾಗಿ ಮಾಡಬೇಕು.

11.

ಮೈಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನಪೂರ್ತಿ ಸುಖ ಕೊಡುತ್ತಾಳೆ. ಮನಸ್ಸಿನಿಂದ ಸುಂದರವಾಗಿರುವವಳನ್ನು ಮಡದಿಯಾಗಿ ಸ್ವೀಕರಿಸುವುದು ಒಳ್ಳೆಯದು.

12.

ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖದು:ಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ.

13.

ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಯಾಕೆಂದರೆ ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ.

14.

ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ಬೆಳಿಗ್ಗೆ ಮಗನಂತೆ ನೋಡುತ್ತಾಳೆ. ದಿನವೆಲ್ಲ ಸೋದರಿಯಂತೆ ಪ್ರೀತಿಸುತ್ತಾಳೆ. ರಾತ್ರಿಯೆಲ್ಲ ವೈಷ್ಯೆಯಂತೆ ನಿರ್ಲಜ್ಜೆಯಾಗಿ ಅವನನ್ನು ಸಂಪೂರ್ಣವಾಗಿ ಸಂತುಷ್ಟಪಡಿಸುತ್ತಾಳೆ.

15.

ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಕಾಗಿರುವುದನ್ನು ಬೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು.

16.

ದೇವರು ಕಲ್ಲು, ಕಟ್ಟಿಗೆ, ಮಣ್ಣಿನ ಮೂರ್ತಿಗಳಲ್ಲಿ ಇಲ್ಲ. ಅವನು ನಮ್ಮ ಭಾವನೆಗಳಲ್ಲಿ, ಯೋಚನೆಗಳಲ್ಲಿ ಇದ್ದಾನೆ.

17.

ಒಬ್ಬ ಕೆಲಸಗಾರನನ್ನು ಅವನು ರಜೆಯಲ್ಲಿರುವಾಗ ಪರೀಕ್ಷಿಸಬೇಕು. ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು. ಆದರೆ ಮಡದಿಯನ್ನು ಮನೆಯಲ್ಲಿ ಬಡತನ ಬಂದಾಗ ಪರೀಕ್ಷಿಸಬೇಕು.

18.

ಮನುಷ್ಯ ತಾನು ಮಾಡುವ ಕೆಲಸಗಳಿಂದ ಶ್ರೇಷ್ಟನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ.

19.

ನಾಸ್ತಿಕರಿಗೆ ಮಿತ್ರರಿರುವುದಿಲ್ಲ. ಶೂರರಿಗೆ ಸಾವಿನ ಭಯವಿರುವುದಿಲ್ಲ. ಆತ್ಮತೃಪ್ತಿಯೇ ಸಂತೋಷದ ತಾಯಿ ಬೇರು.

20.

ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೆಯೋ ಅವನು ಈಡೀ ಜಗದ ಮೇಲೆ ವಿಜಯ ಸಾಧಿಸುತ್ತಾನೆ.

 

ಬದುಕು ಬದಲಿಸುವ ಎಲ್ಲಾ ಚಾಣಕ್ಯ ನೀತಿಗಳು ಮತ್ತು ಚಾಣಕ್ಯ ತಂತ್ರಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

We hope you enjoyed reading above Chanakya Quotes in Kannada. Read more Kannada Quotes here