ಕುವೆಂಪು ಕನ್ನಡ ಕವನಗಳು – 12 Kuvempu Kavanagalu in Kannada

Here is the list of ಕುವೆಂಪು ಕನ್ನಡ ಕವನಗಳು. Kuvempu was a great Kannada poet and writer who lived in India during the 20th century. He was known for his literary works that celebrated the beauty of the Kannada language and its culture. His poems and novels were widely read and appreciated by people from all walks of life.

#1. ಕುವೆಂಪು ಕನ್ನಡ ಕವನಗಳು

ಕುವೆಂಪು ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !

ಭಾರತ ಖಂಡದ ಹಿತವೇ
ನನ್ನ ಹಿತ ಎಂದು,
ಭಾರತ ಮಾತೆಯ ಮತವೇ
ನನ್ನ ಮತ ಎಂದು.!

ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು.

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ.

ಕುವೆಂಪು – ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ.

ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ

ಮೊಲೆಯ ಹಾಲೆಒಂತಂತೆ
ಸವಿಜೆನು ಬಾಯ್ದೆ,
ತಾಯಿಯಪ್ಪುಗೆಯಂತೆ
ಬಾಳಸೊಗಸು ಮೆಯ್ಕೆ.

ಗುರುವಿನೊಲ್ಲುದಿಯಂತೆ
ಶ್ರೇಯಸ್ಸು ಬಾಳೆ
ತಾಯಿನುಡಿಗೆ ದುಡಿದು ಮಾಡಿ
ಇಹಪಾರಗಳೇಲ್‌ಗೆ

ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ,
ಕನ್ನಡಮ್ಮನ ಹರಕೆ ,
ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ,ರನ್ನಾ.

ಕುವೆಂಪು – ಎಂದೆಂದಿಗೂ ನೀ ಕನ್ನಡವಾಗಿರು

ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ
ಕಲ್ಪತರು!

ನೀ ಮೆಟ್ಟುವ ನೆಲ – ಅದೇ ಕರ್ನಾಟಕ
ನೀ ನೇರುವ ಮಾಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರು – ಕಾವೇರಿ

ಪಂಪನನೋಡುವ ನಿನ್ನ ನಾಲಿಗೆ
ಕನ್ನಡವೇ ಸತ್ಯ ,
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ

ಹರಿಹರ ರಾಘವರಿಗೆ ಎರಗುವ ಮನ ,
ಹಾಳಾಗಿಹ ಹಂಪೆಗೆ ಕೊರಗುವ ಮನ ,
ಪೆಂಪಿನ ಬನವಾಸಿಗೆ ಕೊರಗುವ ಮನ ,
ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ ,
ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ ,
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್

ಕನ್ನಡವೇ ಸತ್ಯ !
ಕನ್ನಡವೇ ನಿತ್ಯ !
ಅನ್ಯವೆನಳದೆ ಮಿಥ್ಯಾ !

ಕುವೆಂಪು – ಜಯ ಹೇ ಕರ್ನಾಟಕ ಮಾತೆ

ಜೈ ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||

ಜೈ ! ಸುಂದರ ನದಿ ವನಗಳ ನಾಡೆ
ಜಯಹೇ ರಸ ಋಷಿಗಳ ಬೀಡೆ ,
ಗಂಧದ ಚಂದದ ಹೊನ್ನಿನ ಗಣಿಯೇ ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ

ಜನನಿ ಜೋಗುಳದ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಸ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಾಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಪತಿ ಜನ್ನ
ಕಬ್ಬಿಗ ನುಡಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಾಕರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.

ತೈಲಪ ಹೊಯ್ಸಲರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರರಂಗ
ಚೈತನ್ಯ ಪರಮಹಂಸ ವೀವೆಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.

ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಣಗಳ ಸೆಳೆಯುವ ನೋಟ
ಕ್ರಿಶ್ಚಿಯನ್ ಮುಸಲ್ಮಾನ
ಪಾರಸಿಕ ಜೈನರ ಉದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾ ಧಾಮ.

ಕನ್ನಡ ನುಡಿ ಕುಣಿದಾಡುತ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.

ಕುವೆಂಪು – ಭಾರತ ತಪಸ್ವಿನಿ

ವೇದರುಶಿ ಭೂಮಿಯಲಿ ನಾಕನರಕಗಳಿಂದ
ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ
ಸಂದಿಸಿವೆ , ಮಾನವನೆಡೆಯ ಕಾಳಕೂಟದಲಿ
ಅಮೃತವನ ಹಾರಿಸಿ ಬಲಿರಕ್ತದಲಿ ಮಿಂದು
ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು

ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ
ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ ಸವೆಯುತಿದೆ ,
ಇಂದಿನ ಮಹಾ ತಪಸ್ಸಿನ ಚಿತೆಯ ರಕ್ತಮ ವಿಭೂತಿಯೊಳೆ
ಮುಂದಿನ ನವೋದಯದ ಧವಳಿಮ ಪಿನಾಕಾದಾರನೈಥಹನು ,
ಮತ್ತೊಮ್ಮೆ ಭಾರತಾಂಬೆಯು ಜಗದ ಬೆಳಗಾಗುವುದು ,

ಹೆಮ್ಮೆ ಗೌರವಗಳಿಂದ ಜನಗಣದ ಕಟು ನಿರ್ಧಯದ
ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ ಮೆರೆವಳು
ತಪಸ್ವಿನಿಯೆ ಚಕ್ರವರ್ತಿನಿಯಾಗಿ !

#2. Kuvempu Kavanagalu

ಕುವೆಂಪು – ಪೂವು

ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು||
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು|| ಪಲ್ಲವಿ ||

ಮಜ್ಜನವ ಮಂಜಿನೊಳು|
ನೀ ಮಾಡಿ ನಲಿವಾಗ|
ಉಜ್ಜುಗದಿ ಸಂಜೆಯೊಳು|
ನರರೆಲ್ಲ ಬರುವಾಗ||

ತಳಿರೊಳಗೆ ಕೋಕಿಲೆಯು|
ಕೊಳಲನು ನುಡಿವಾಗ|
ಎಳೆದಾದ ರವಿಕಿರಣ|
ಇಳೆಯನ್ನು ತೊಳೆವಾಗ||

ಕವಿವರನು ಹೊಲಗಳಲಿ|
ತವಿಯಿಂದ ತೊಳಗುತಿಹ|
ಭುವನವನು ಸಿಂಗರಿಸಿ|
ಸವಿಯಾಗಿ ಬೆಳಗುತಿಹ||

ಅಲರುಗಳ ಸಂತಸದಿ|
ತಾ ನೋಡಿ ನಲಿವಾಗ|
ನಲಿ ಪೂವೆ ಎನ್ನುತ್ತಲಿ|
ರಾಗದಿಂ ನುಡಿವಾಗ||

ಗೀತವನು ಗೋಪಾಲ|
ಏಕಾಂತ ಸ್ಥಳದೊಳು|
ಪ್ರೀತಿಯಿಂ ನುಡಿವಾಗ|
ನಾಕವನು ಸೆಳೆಯುತ್ತ||

ವನದಲ್ಲಿ ಪಕ್ಷಿಗಳು|
ಇನನನ್ನು ಸವಿಯಾಗಿ|
ಮನದಣಿವ ಗೀತದಿಂ|
ಮನದಣಿಯೆ ಕರೆವಾಗ||

ಮೋಡಗಳು ಸಂತಸದಿ|
ಮೂಡುತಿಹ ಮಿತ್ರನನು|
ನೋಡಿ ನೋಡಿ ನಲಿಯಲು
ನಾಡ ಮೇಲ್ ನಡೆವಾಗ||

ಮುಂಜಾನೆ ಮಂಜಿನೊಳು|
ಪಸುರಲ್ಲಿ ನಡೆವಾಗ|
ಅಂಜಿಸುವ ಸಂಜೆಯೊಳು|
ಉಸಿರನ್ನು ಎಳೆವಾಗ||

ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು|
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು||

ಕುವೆಂಪು – ಕವನ – ಶಶಿಯ ದೋಣಿ

” ನೀಲಧಿಯಲಿ ಶಶಿಯ ದೋಣಿ
ಈಸುತಿತ್ತು;
ಮಂದಾನಿಲಂ ಮಂದಮಂದಂ
‌‌‌‌‌‌ ಬೀಸುತಿತ್ತು;
ತೇನೆ ಹಕ್ಕಿಯೊಂದು ವಾಣಿ
ಕೇಳುತಿತ್ತು ;
ಮುಗಿಲಿನಿಂದ ಜೊನ್ನ ಜೇನು
ಬೀಳುತಿತ್ತು !

ಕುಳಿತು ಶಶಿಯು ದೋಣಿಯಲಿ
ಮುಗಿಲ್ದೆರೆಯ ಬಾನಿನಲ್ಲಿ
ಈಸಿ ಈಸಿ ,
ಬೆರೆತು ತಂಪುಗಾಳಿಯಲಿ
ಮಲೆಯ ಬನ ಬನಂಗಳಲಿ
‌‌ಬೀಸಿ ಬೀಸಿ,

ಮಲೆ = ಬೆಟ್ಟ ,ಜೊನ್ನ = ಬೆಳದಿಗಂಗಳು .

ಕುವೆಂಪು – ಪಕ್ಷಿಕಾಶಿ

ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:

ಇದು ಪಕ್ಷಿಕಾಶಿ!

ದೇವನದಿಯಲ್ಲಿ ದ್ವೀಪಕೃಪೆಯಲ್ಲಿ

ಭಾವತರುವಾಸಿ

ಪ್ರಾಣಪಕ್ಷಿಕುಮಿಹುದು ರಕ್ಷೆಯಲ್ಲಿ

ನಿತ್ಯಮವಿನಾಶಿ:

ಶಕ್ತಿ ಸುತ್ತಲೂ ಕಾವಲಿಹುದು ಕಾಣ್‌

ಅಗ್ನಿಜಲರಾಶಿ:

ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು

ಅಲ್ಲೆ ಇಟ್ಟು ಬಾ;

ಬಿಂಕದುಕುತಿಯನು ಕೊಂಕು ಯುಕುತಿಯನು

ಎಲ್ಲ ಬಿಟ್ಟು ಬಾ;

ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,

ಹಮ್ಮನುಳಿದು ಬಾ:

ಇಕ್ಷು ಮಧುರಮನೆ ಮೋಕ್ಷ ಪಕ್ಷಿಯುಲಿ

ನಾಡಿನಾಡಿಯಲಿ ಹಾಡಿ ಹರಿದು ನಲಿ

ದಾಡಬಹುದು ಬಾ!

#3. Kuvempu Kavanagalu in annada

ಕುವೆಂಪು – ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ:
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯಶಿವ!

ಕುವೆಂಪು –ನನ್ನ ಮನೆ ಕವನ

ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ !
ನನ್ನ ತಾಯಿಯೊಲಿದ ಮನೆ,
ನನ್ನ ತಂದೆ ಬೆಳೆದ ಮನೆ:
ನನ್ನ ಗೆಳೆಯರೊಡನೆ ಕೂಡಿ
ಮುದ್ದು ಮಾತುಗಳನು ಆಡಿ
ಮಕ್ಕಳಾಟಗಳನು ಹೂಡಿ
ನಾನು ನಲಿದ ನನ್ನ ಮನೆ !
ನನ್ನ ಗಿರಿಜೆಯಿದ್ದ ಮನೆ,
ನನ್ನ ವಾಸುವಿದ್ದ ಮನೆ:
ಮನೆಯ ಮುತ್ತಿ ಬರಲು ಚಳಿ
ಆಳು ಮಂಜ ಒಲೆಯ ಬಳಿ
ನಮ್ಮನೆಲ್ಲ ಕತೆಗಳಲಿ
ಕರಗಿಸಿದ್ದ ನನ್ನ ಮನೆ !
ತಾಯಿ ಮುತ್ತು ಕೊಟ್ಟ ಮನೆ,
ತಂದೆ ಎತ್ತಿಕೊಂಡ ಮನೆ:
ಮನೆಗೆ ಬಂದ ನಂಟರೆಲ್ಲ
ಕೂಗಿ ಕರೆದು ಕೊಬ್ಬರಿ ಬೆಲ್ಲ –
ಗಳನು ಕೊಟ್ಟು, ಸವಿಯ ಸೊಲ್ಲ –
ನಾಡುತ್ತಿದ್ದ ನನ್ನ ಮನೆ !
ನಾನು ನುಡಿಯ ಕಲಿತ ಮನೆ,
ನಾನು ನಡಿಗೆಯರಿತ ಮನೆ:
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗು ಹಾಡಿ ಹಾಡಿ
ಮಲೆಯನಾಡ ಸಗ್ಗಮಾಡಿ
ನಲಿಸುತ್ತಿದ್ದ ನನ್ನ ಮನೆ !
ನಾನು ಬಿದ್ದು ಎದ್ದ ಮನೆ,
ಮೊದಲು ಬೆಳಕು ಕಂಡ ಮನೆ:
ತಿಪ್ಪ ತಿಪ್ಪ ಹೆಜ್ಜೆಯಿಟ್ಟು
ಬಿಸಿಲ ಕೋಲ ಹಿಡಿದು ಬಿಟ್ಟು
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ !

#4. ಕುವೆಂಪು ವೈಚಾರಿಕ ಕವನಗಳು

ಕುವೆಂಪು –ದೋಣಿ ಸಾಗಲಿ, ಮುಂದೆ ಹೋಗಲಿ

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ.

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||ದೋಣಿ ಸಾಗಲಿ||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೊಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ||ದೋಣಿ ಸಾಗಲಿ||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಆಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ||ದೋಣಿ ಸಾಗಲಿ||

ಕುವೆಂಪು – ಓ ನನ್ನ ಚೇತನ

ಓ ನನ್ನ ಚೇತನ
ಆಗು ನೀ ಅನಿಕೇತನ.

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ.!

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವವನೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ.!

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ.!

ಅನಂತ ತಾನ್ ಅನಂತವಾಗಿ
ಅಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು
ಓ ನನ್ನ ಚೇತನ
ಆಗು ನೀ ಅನಿಕೇತನ.!

Read More Kannada Nudimuttugalu here

Conclusion

Kuvempu passed away many years ago, but his legacy lives on. He is remembered as a great poet and writer, but more than that, he is remembered as a champion of the Kannada language and culture. His passion for his mother tongue inspired a generation and ensured that Kannada would remain a vibrant and integral part of Indian culture for years to come.

FAQ

  1. Who was Kuvempu? Kuvempu was a renowned Kannada poet, novelist, playwright, and scholar from India. He was born in 1904 in Karnataka and is considered one of the greatest writers of the Kannada language.
  2. What was Kuvempu’s contribution to Kannada literature? Kuvempu made significant contributions to Kannada literature through his poetry, novels, and plays. He was known for his use of simple and accessible language, as well as his ability to capture the essence of Kannada culture and tradition in his works.
  3. What are some of Kuvempu’s famous works? Kuvempu is known for several literary works, including the epic poem “Sri Ramayana Darshanam,” the novel “Kanooru Heggadithi,” and the play “Yakshagana.” He also wrote many essays and articles on a range of topics, including literature, culture, and education.
  4. What was Kuvempu’s contribution to education? Kuvempu was a strong advocate of education in the Kannada language. He believed that education should be accessible to all and that children should be taught in their mother tongue. He played a key role in the establishment of the University of Mysore, where he served as the Vice Chancellor.
  5. What is Kuvempu’s legacy? Kuvempu’s legacy is one of promoting the Kannada language and culture. His works continue to inspire and educate people, and his efforts to promote education in the Kannada language have helped to preserve and strengthen the language. He is widely recognized as a cultural icon in India and a champion of Kannada literature and culture.