200+ ಕನ್ನಡ ನುಡಿಮುತ್ತುಗಳು – ಮಹನೀಯರ ನುಡಿಮುತ್ತುಗಳು

If you looking for a Kannada Nudimuttugalu then you are in the right place. Here is the list of ಕನ್ನಡ ನುಡಿಮುತ್ತುಗಳು – ಮಹನೀಯರ ನುಡಿಮುತ್ತುಗಳು. Nudimuttugalu is a Kannada term that translates to ‘new expressions.’ It refers to the process of creating new words and expressions in the Kannada language. The origin of Nudimuttugalu can be traced back to the early days of the Kannada language. Kannada was primarily a spoken language, and the written form was limited to a few inscriptions and manuscripts. As the language evolved, new words and expressions were necessary to express the changing socio-cultural landscape of the region.

#1. ಕನ್ನಡ ನುಡಿಮುತ್ತುಗಳುಮಹನೀಯರ ನುಡಿಮುತ್ತುಗಳು

ಇಂದ್ರಿಯಗಳ ದಾಸನು, ದುಃಖಗಳ ದಾಸನೂ ಆಗುತ್ತಾನೆ. – ಆಲ್ಬರ್ಟ್ ಐನ್‍ಸ್ಟೀನ್

ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಮಾತ್ರ ಜನರು ಒಳ್ಳೆಯವರಾಗಿ ಕಾಣಿಸಿಕೊಂಡರೆ ಸಾಲದು, ಅದು ಅವರ ಜೀವನದ ಅವಿಭಾಜ್ಯ ಅಂಗವಾಗಬೇಕು. – ಆಲ್ಬರ್ಟ್ ಐನ್‍ಸ್ಟೀನ್

“ಹೃದಯವಂತಿಕೆ ಇಲ್ಲದಿರುವಾಗ, ಬುದ್ಧಿವಂತಿಕೆ ಎಷ್ಟಿದ್ದರೂ ಪ್ರಯೋಜನವಾಗದು.” – ಎಡ್ವರ್ಡ್ ಯಂಗ್

ಕೆಲವುಸಲ ಸಣ್ಣಪುಟ್ಟ ಉಪಕಾರಗಳೂ ಒಳ್ಳೆಯ ನಡವಳಿಕೆಯನ್ನು ಮೂಡಿಸುತ್ತವೆ. – ಎಮರ್ಸನ್

ಕಾಮವಿದ್ದವನಿಗೆ ರಾಮನಿಲ್ಲ, ರಾಮನಿದ್ದವನಿಗೆ ಕಾಮವಿಲ್ಲ; ಕಾಮವನ್ನು ಗೆದ್ದವನು ರಾಮನನ್ನು ಗೆಲ್ಲಬಲ್ಲ. – ಓಶೋ

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ. – ಕನ್‌ಫ್ಯೂಷಿಯಸ್

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು. – ಕುವೆಂಪು

ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು “ಪುಸ್ತಕ”. – ಗಯಟೆ

ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ “ತಾಳ್ಮೆ”. – ಗೌತಮ ಬುದ್ಧ

ಕನ್ನಡ ನುಡಿಮುತ್ತುಗಳು - Kannada nudimuttugalu
ಕನ್ನಡ ನುಡಿಮುತ್ತುಗಳು – Kannada nudimuttugalu

ಪ್ರಜೆಗಳನ್ನು ಹಸಿವು ಮತ್ತು ಅಂಧಕಾರದಲ್ಲಿ ಮುಳುಗಿಸುವ ಯಾವುದೇ ಧರ್ಮವನ್ನು ನಾನು ಇಷ್ಟಪಡುವುದಿಲ್ಲ. – ಜವಹರ್ ಲಾಲ್ ನೆಹರು. 

ಎಲ್ಲರೊಂದಿಗೂ ಚೆನ್ನಾಗಿರಿ, ಆದರೆ ಕೆಲವರೊಂದಿಗೆ ಮಾತ್ರ ನಿಕಟವಾಗಿರಿ. ಹೀಗೆ ನಿಕಟರಾದವರಲ್ಲೂ ನೀವು ಅತಿಯಾಗಿ ತಿಳಿದುಕೊಂಡವರಲ್ಲಿ ಮಾತ್ರ ನಿಮ್ಮ ಆಪ್ತ ವಿಚಾರಗಳನ್ನು ತಿಳಿಸಿ. – ಜಾರ್ಜ ವಾಷಿಂಗ್ಟನ್

ಹಣ ಎಂಬುದು ಉಪ್ಪಿನಂತೆ, ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ.- ಶಿವರಾಮಕಾರಂತ.

ನಿಮಗೆ ಪ್ರತಿಭೆ ಇದ್ದರೆ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರಿ. – ಜಿಮ್ ಕ್ಯಾರಿ

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ.
ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.- ಅ.ನ.ಕೃ

ದುಃಖ ಬಂದಾಗ ನಗುತ್ತಿರುವುದರಿಂದ ದುಃಖದಲ್ಲೂ ಸುಖ ಸಿಗುತ್ತದೆ. – ರಾಮಕೃಷ್ಣ ಪರಮಹಂಸ

“ನಡೆದುಬಂದ ದಾರಿ ಕಡೆಗೆ ಹೊರಳಿಸಬೇಡ ಕಣ್ಣನು
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ” . – ಅಡಿಗರು

ಬೇರೊಬ್ಬರನ್ನು ಅಪಹಾಸ್ಯ ಮಾಡುವುದರ ಅರ್ಥ ಮತ್ತೊಬ್ಬ ಶತ್ರುವಿಗೆ ಜನ್ಮ ಕೊಟ್ಟಂತೆ. – ಅನಕೃ

ಬೇರೆಯವರಿಗೆ ಸ್ವಾತಂತ್ರ ನೀಡದವರಿಗೆ ಸ್ವತಃ ಸ್ವಾತಂತ್ರ್ಯವನ್ನು ಅನುಭವಿಸುವ  ಹಕ್ಕು ಇರುವುದಿಲ್ಲ. – ಅಬ್ರಹಾಂ ಲಿಂಕನ್ 

#2. Kannada Nudimuttugalu – ಯಶಸ್ಸಿನ ನುಡಿಮುತ್ತುಗಳು

ಯಶಸ್ಸು ಗಳಿಸಬೇಕು ಎಂಬ ನಿಮ್ಮ ಅಚಲ ನಿರ್ದಾರ  ಮಾತ್ರ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಬಲ್ಲುದು. – ಅಬ್ರಹಾಂ ಲಿಂಕನ್

ನೀವು ಸರಿಯಾದ ಸ್ಥಳದಲ್ಲೇ ಕಾಲು ಊರಿದ್ದೀರಿ ಎಂಬುದನ್ನು ಖಚಿತಪಡಿಸಿ ಕೊಳ್ಳಿ, ಬಳಿಕ ದೃಢವಾಗಿ ನಿಂತುಕೊಳ್ಳಿ. – ಅಬ್ರಹಾಂ ಲಿಂಕನ್

ಕನಸುಗಳನ್ನು ಸಾಕಾರಗೊಳಿಸಲು ನೀವು ಮಾಡುವ ಪ್ರಯತ್ನ ನಿಮ್ಮ ಮಿತಿಯನ್ನೂ ಮೀರಿ ನೀವು ಬೆಳೆಯುವಂತೆ ಮಾಡಿಬಿಡುತ್ತದೆ. – ಆಲ್ಬರ್ಟ್ ಐನ್‍ಸ್ಟೀನ್

ಕೆಲವು ಸಣ್ಣ ವಿಷಯಗಳಲ್ಲಿ ಸತ್ಯ ಹೇಳಲು ನಿರ್ಲಕ್ಷ್ಯ ತೋರಿಸಿದರೆ, ಕೆಲವು ಪ್ರಮುಖ ವಿಷಯಗಳಲ್ಲಿ ಅಂತಹವರನ್ನು ಇತರರು ನಂಬುವುದಿಲ್ಲ. – ಆಲ್ಬರ್ಟ್ ಐನ್‍ಸ್ಟೀನ್

ಜ್ಞಾನಕ್ಕಿಂತ, ಕಲ್ಪನೆಯೇ ಹೆಚ್ಚು ಮುಖ್ಯವಾದುದು. – ಆಲ್ಬರ್ಟ್ ಐನ್‍ಸ್ಟೀನ್

ಯಶಸ್ಸಿನ ವ್ಯಕ್ತಿಯಾಗುವ ಬದಲಿಗೆ, ಮೌಲ್ಯಯುತ ವ್ಯಕ್ತಿಯಾಗುವುದಕ್ಕೆ ಪ್ರಯತ್ನಿಸಿ. – ಆಲ್ಬರ್ಟ್ ಐನ್‍ಸ್ಟೀನ್

ವಿಜ್ಞಾನವನ್ನು ಜೀವನ ನಿರ್ವಹಣೆಗಾಗಿ ಬಳಸಿಕೊಂಡಿಲ್ಲ ಎಂದಾದರೆ ಅದ್ಭುತ ವಿಷಯ. – ಆಲ್ಬರ್ಟ್ ಐನ್‍ಸ್ಟೀನ್

ಯಾವುದೇ ಕೆಲಸವಾದರೂ ಅದರಲ್ಲಿ ತಲ್ಲಿನರಾದಾಗ ಮಾತ್ರ ಅದು ಪ್ರಯೋಜನಕಾರಿಯಾಗುವುದು. – ಇಲಿಯಟ್

ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ. – ಉಪನಿಷತ್

ಉನ್ನತಿಯ ದಾರಿಯಲ್ಲಿ ಸಭ್ಯತೆಯ ಅಗತ್ಯ ಹೆಚ್ಚು ಇರುತ್ತದೆ. – ಯಂಗ್ 

ಉತ್ಸಾಹ ಇಲ್ಲದ ಹೊರತು ಸಾಧನೆ ಅಸಾಧ್ಯ. – ಎಮರ್ಸ್ ನ್

“ಆತ್ಮವಿಶ್ವಾಸ” ಸಫಲತೆಯ ಮೂಲ ರಹಸ್ಯ. – ಎಮರ್ಸ್ ನ್

ಮಾತು ’ತಪ್ಪ’ದ ಹಾಗೆ ನೋಡಿಕೊಳ್ಳಬೇಕಾದರೆ ನೀವು ಯಾರ ಜೊತೆ-ಯಾವಾಗ, ಎಲ್ಲಿ ಹಾಗೂ ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ.- ಎಮರ್ಸ್ ನ್

#3. ಕನ್ನಡ ಜೀವನದ ನುಡಿಮುತ್ತುಗಳು

ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ,
ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು. – ಅನಾಮಿಕ.

ಕ್ರೂರ ಹುಲಿಗಿಂತ ಕ್ರೂರವಾದುದೆಂದರೆ ಜನರನ್ನು ಹಿಂಸಿಸುವ ಸರಕಾರ. – ಕನ್‌ಫ್ಯೂಷಿಯಸ್

ನೋವೆಲ್ಲಾ ಜೀವಕ್ಕೆ ಪುಟವಿಡುವ ಪಾಕ. – ಕನ್‌ಫ್ಯೂಷಿಯಸ್

ನನ್ನ ಬದುಕಿನ ಬಗೆಗೆ ಯಾರೂ ಬರೆಯಲಾರರು. ಏಕೆಂದರೆ ಅದು ಮಾನವರ ದೃಷ್ಟಿಗೆ ಗೋಚರವಾಗುವಂತೆ ಹೊರ-ಮುಖವಾಗಿ ಸಾಗಿಲ್ಲ.- ‘ಕುವೆಂಪು’

ಉತ್ಸಾಹವೆಂಬುದು ಕಲ್ಲಿದ್ದಲ ಒಳಗೆ ಕುದಿಯುತ್ತಿರುವ ಕಾವಾಗಬೇಕೇ ವಿನಃ ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು -ಕುವೆಂಪು

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು. – ಕುವೆಂಪು 

ಪುಸ್ತಕ ಪಾಂಡಿತ್ಯಕ್ಕಿಂತ ಅನುಭವಕ್ಕೆ ಹೆಚ್ಚು ಬೆಲೆ. – ಕ್ಯಾಡ್ಮನ್ 

ಹೆಚ್ಚಿನ ಕನಸುಗಳು ಮೊದಲು ಅಸಾಧ್ಯ ಎಂದೇ ತೋರುತ್ತವೆ. ಆದರೆ ಅವುಗಳನ್ನು ನನಸು ಮಾಡಲು ನಾವು ಮನಸ್ಸು ಕೊಟ್ಟಾಗ ಅವುಗಳು ನಮಗೆ ಅನಿವಾರ್ಯವಾಗಿ ಬಿಡುತ್ತವೆ. – ಕ್ರಿಸ್ಟೋಫರ್ ರೀವ್

ಕೊಂಬಿಲ್ಲದ ದನಗಳು ಗ್ರಾಮಗಳಲ್ಲಿ ಇರುತ್ತವೆ. ಮೆದುಳಿಲ್ಲದ ಜನಗಳು ಪಟ್ಟಣಗಳಲ್ಲಿರುತ್ತಾರೆ. – ಗೆಲಿಲಿಯೊ

ಜೀವನದಲ್ಲಿ ತತ್ವ ಮತ್ತು ಸಿದ್ದಾಂತಗಳನ್ನು ಮರೆತಾಗ ಸೋಲು ಎದುರಾಗುತ್ತದೆ – ಜವಹರ್ ಲಾಲ್ ನೆಹರು.

ನಮ್ಮ ಚಿಂತನೆಯೇ ನಮಗೆ ಫಲವನ್ನು ಕೊಡುತ್ತದೆ. – ಜವಹರ್ ಲಾಲ್ ನೆಹರು. 

ಆದರ್ಶಗಳಿಲ್ಲದ ಮನುಷ್ಯನಲ್ಲಿ, ಯಾವುದೇ ಗೊತ್ತು ಗುರಿ ಮತ್ತು ಒಳ್ಳೆಯ ಉದ್ದೇಶಗಳಿರುವುದಿಲ್ಲ. – ಜವಹರ್ ಲಾಲ್ ನೆಹರು. 

#4. ಒಳ್ಳೆಯ ನುಡಿಮುತ್ತುಗಳು

ವ್ಯಕ್ತಿಯಾದವನು ತನ್ನನ್ನು ತಾನು ತಿದ್ದಿಕೊಳ್ಳುವುದು ಮೊದಲ ಕೆಲಸ. – ಜಾರ್ಜ್ ಬರ್ನಾಡ್ ಷಾ

ನಿರಾಸೆ ಮರಣದ ಮತ್ತೊಂದು ಹೆಸರು. – ಟಾಲ್ ಸ್ಟಾಯ್

ವಿನಾಶಕಾಲೇ ವಿಪರೀತ ಸಿಧ್ಧಿ. – ಟಿ.ಪಿ.ಕೈಲಾಸಂ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ. – ಟಿ.ಪಿ.ಕೈಲಾಸಂ

ಮನುಷ್ಯ ಅಂದ ಮೇಲೆ ಮೊದಲು ಆತ್ಮಾಭಿಮಾನ ಹೊಂದಿರಬೇಕು. ಆತ್ಮಾಭಿಮಾನ ಇಲ್ಲದವನು ನಿಜಕ್ಕೂ ಮನುಷ್ಯನಾಗಿ ಬೆಳೆಯಲಾರ. – ಶಿವರಾಮ ಕಾರಂತ

ಬದುಕನ್ನು ನಾವು ನಿರಾಕರಿಸಬಾರದು, ಜೀವನದಿಂದಲೇ ಜೀವನ ಎಂಬುದನ್ನು ತಿಳಿಯಬೇಕು. – ಶಿವರಾಮಕಾರಂತ.

ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ತಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. – ಎಸ್. ರಾಧಕೃಷ್ಣನ್ 

ವಿದ್ಯೆಯ ಮುಖ್ಯ ಗುರಿಯೇನೆಂದರೆ ಇತರರೊಡನೆ ಕೂಡಿ ಬಾಳುವ ಕಲೆಯನ್ನು ಕಲಿಸುವುದು. – ಡಾ.ಎಸ್.ರಾಧಾಕೃಷ್ಣನ್

ಧರ್ಮವೆಂದರೆ ಒಳ್ಳೆಯ ನಡತೆ; ಬರೇ ನಂಬಿಕೆಯಲ್ಲ.- ಡಾ. ರಾಧಾಕೃಷ್ಣನ್ 

ಶಿಕ್ಷಣದ ಮುಖ್ಯ ಗುರಿ ಕೂಡಿ ಬಾಳುವುದನ್ನು ಕಲಿಸುವುದಾಗಬೇಕು. – ಡಾ.ಎಸ್. ರಾಧಾಕೃಷ್ಣನ್

ಒಂದು ದೇಶ ರೂಪುಗೊಳ್ಳುವುದು ಅಲ್ಲಿನ ಶಿಕ್ಷಣ ವ್ಯವಸ್ಥೆ ಹೇಗಿದೆ ಎನ್ನುವುದರ ಮೇಲೆ. – ಡಾ. ರಾಧಕೃಷ್ಣನ್

ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. –ಡಿ.ವಿ.ಜಿ

ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ ಕಾಣುವ ಪ್ರತಿಬಿಂಬವೇ ಪತಿ. – ತ್ರಿವೇಣಿ

ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು. – ಥಾಮಸ್ ಪುಲ್ಲರ್

ಜ್ಞಾನವೆಂಬುದು ಒಂದು ಖಜಾನೆ, ಅಭ್ಯಾಸವೆಂಬುದು ಅದರ ಕೀಲಿ. – ಥಾಮಸ್ ಪುಲ್ಲರ್

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ. – ದ.ರಾ.ಬೇಂದ್ರೆ.

ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ. – ನಂಬಿಯಾರ್

ಸಾಧನೆಯ ಹಂತ ತಲುಪುವವರೆಗೆ ಎಲ್ಲವೂ ಕಷ್ಟ. – ನೆಲ್ಸನ್ ಮಂಡೇಲಾ

ಯಾರಿಗೂ ನೋವನ್ನುಂಟು ಮಾಡದಿರುವವನೇ ಸಜ್ಜನ. – ನ್ಯೂಮಾನ್

ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ. – ಪಂಚತಂತ್ರ

ಸುಖ ಸ್ನೇಹಿತರನ್ನು ಕರೆ ತರುತ್ತದೆ, ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ. – ಪಬ್ಲಿಯಸ್ ಸೈರಸ್

ಇರಬೇಕು ಇರಬೇಕು ಸಂಸಾರದಿ ಜನಕಾದಿ ರಾಜ ಋಷಿಗಳಂತೆ. – ಪುರಂದರದಾಸರು

#5. ನಂಬಿಕೆಯ ನುಡಿಮುತ್ತುಗಳು

ಧೈರ್ಯ  ಎನ್ನುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ  ಆಸ್ತಿ. – ಲೋಕಮಾನ್ಯ ತಿಲಕ್ 

ಭವಿಷ್ಯವನ್ನು ನಾವೇ ರೂಪಿಸಿಕೊಂಡರೂ, ಅದು ವಿಧಿ ಎಂದುಕೊಳ್ಳವುದು ಮೂಢತನ. – ಬೆಂಜಮಿನ್ ಡಿಸ್ರೇಲಿ

ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? – ಬೆಂಜಮಿನ್ ಫ್ರಾಂಕ್ಲಿನ್

ಕಾರಣವಿಲ್ಲದೆ ಕೋಪ ಬರುವುದಿಲ್ಲ. ಆದರೆ ಅಪರೂಪಕ್ಕೊಮ್ಮೆ ಅದು ಒಳ್ಳೆಯ ಕಾರಣಕ್ಕೆ ಆಗಿರುತ್ತದೆ. – ಬೆಂಜಮಿನ್ ಫ್ರಾಂಕ್ಲಿನ್

ಇಂದು ಮಾಡಬಹುದಾದ ಕೆಲಸವನ್ನು ನಾಳೆ ಮಾಡುವುದಕ್ಕೆಂದು ಬಿಡಬೇಡಿ. – ಬೆಂಜಮಿನ್ ಫ್ರಾಂಕ್ಲಿನ್

ನಿರಾಸೆಯು ಕೆಲವರನ್ನು ಹಾಳು ಮಾಡಿದರೆ, ಅತಿಯಾಸೆ ಅನೇಕರನ್ನು ಹಾಳು ಮಾಡುತ್ತದೆ. – ಬೆಂಜಮಿನ್ ಫ್ರಾಂಕ್ಲಿನ್ 

ನಿಮ್ಮ ಶತ್ರುಗಳನ್ನು ಪ್ರೀತಿಸಿ, ಎಕೆಂದರೆ ಅವರು ನಿಮ್ಮ ತಪ್ಪುಗಳನ್ನು ನಿಮಗೆ ತಿಳಿಸುತ್ತಾರೆ. – ಬೆಂಜಮಿನ್ ಫ್ರಾಂಕ್ಲಿನ್ 

ಜ್ಞಾನ ವೃದ್ದಿಗೆ ಮಾಡುವ ಉತ್ತಮ ಹೂಡಿಕೆಗೆ, ಅತ್ಯುತ್ತಮ ಬಡ್ಡಿ ಬರುತ್ತದೆ. – ಬೆಂಜಮಿನ್ ಫ್ರಾಂಕ್ಲಿನ್

ನೀನು ಬೇರೆಯವರ ಯೋಗ್ಯತೆ ಅಳೆಯುತ್ತಿದ್ದಿಯಾದರೆ, ನಿನಗೆ ಪ್ರೀತಿಸಲು ಸಮಯವೇ ಇರುವುದಿಲ್ಲ. – ಮದರ್ ತೆರೇಸಾ

ನಿಮ್ಮ ಮನಸ್ಸಿನಲ್ಲಿರುವ ಕೀಳರಿಮೆ ಮತ್ತು ಭಯವನ್ನು ಕಿತ್ತೊಗೆದರೆ, ನೀವು ಅದ್ಭುತವಾದುದನ್ನು ಸಾಧಿಸಲು ಸಮರ್ಥರಾಗುವಿರಿ. – ಮದರ್ ತೆರೇಸಾ

ಎದುರಿಗೆ ಕಾಣದ ಮನುಷ್ಯರನ್ನೇ ಗೌರವಿಸದಿದ್ದರೆ; ಕಾಣದ ದೇವರನ್ನು ಹೇಗೆ ಪ್ರಾರ್ಥಿಸಲು ಸಾಧ್ಯ. – ಮದರ್ ಥೆರೇಸಾ

ಒಂಟಿತನ ಮತ್ತು ಬೇಡದವನಾಗಿ ಜೀವಿಸುವುದು ದಟ್ಟದಾರಿದ್ರ್ಯಕ್ಕಿಂತ ಅನುಭವಿಸುವ ಹಿಂಸೆ. – ಮದರ್ ಥೆರೇಸಾ

ನನ್ನ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುವುದಕ್ಕಿಂತ; ನಾನು ಮಾಡುವ ಕಾರ್ಯದಲ್ಲಿ ನನಗೆ ವಿಧೇಯತೆ ದಯಪಾಲಿಸು ಎಂದು ಬೇಡುತ್ತೇನೆ. – ಮದರ್ ಥೆರೆಸಾ

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ. – ಮನುಸ್ಮೃತಿ

ಹಿಂಸೆ ಎಂದಿಗೂ ನಮ್ಮ ಗುರಿಯನ್ನು ಸಾಧಿಸಲಾರದು. – ಗಾಂಧೀಜಿ

ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ. – ಗಾಂಧೀಜಿ

ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ. – ಗಾಂಧೀಜಿ

ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು, ಅದರಲ್ಲಿ ಮುಳುಗುವುದು ಆತ್ಮಹತ್ಯೆ. – ಗಾಂಧೀಜಿ

ನನ್ನ ಸೋದರಿಯರೇ, ನೀವು ಸ್ವತಂತ್ರರಾಗಬೇಕಾದರೆ ಮೊದಲು ನಿರ್ಭೀತರಾಗಿರಿ. ನಿಮ್ಮ ದೈಹಿಕ ದೌರ್ಬಲ್ಯಕ್ಕಿಂತ ಸಮಾಜ ನಿಮ್ಮ ಮೇಲೆ ವಿಧಿಸಿ ಬಿಡುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ – ಇವೇ ಸಂಕೋಲೆಗಳಾಗಿ ನಿಮ್ಮನ್ನು ಕಾಡುತ್ತವೆ. ಮೊದಲು ಇವುಗಳಿಂದ ಹೊರ ಬನ್ನಿ. ವಿಶಾಲ ಜಗತ್ತು ನಿಮಗಾಗಿ ಕಾದಿದೆ. ~ ಮಹಾತ್ಮ ಗಾಂಧೀಜಿ.

ಪ್ರಾಮಾಣಿಕ ಟೀಕೆ ಟಿಪ್ಪಣಿ ಆರೋಗ್ಯಪೂರ್ಣವಾದ ಗುಣ. – ಮಹಾತ್ಮ ಗಾಂಧಿ

ಯಾವುದೇ ಸಂಸ್ಕೃತಿ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಳ್ಳದಿದ್ದರೆ ಅದು ಹೆಚ್ಚು ಕಾಲ ಉಳಿಯದು. – ಮಹಾತ್ಮ ಗಾಂಧಿ

ಅಹಿಂಸೆ ಇಲ್ಲದೆ, ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ. – ಗಾಂಧೀಜಿ

ನಿನ್ನನ್ನು ನೀನು ತಿಳಿದುಕೊಳ್ಳೋದು ನಿನ್ನ ಮನಸ್ಸನ್ನು ಹದಗೋಳಿಸಿಕೊಂಡಾಗ ಮಾತ್ರ. – ಗಾಂಧೀಜಿ

ಯೋಗ್ಯತೆಗೆ ಕುಲರೂಪಗಳು ಕಾರಣವಲ್ಲ, ಉತ್ತಮರಾಗಲೀ, ಅಲ್ಪರಾಗಲೀ, ತಮ್ಮ ಕಾರ್ಯದಿಂದ ಶ್ರೇಷ್ಠ ರಾಗುವರು. – ಮಹಾಭಾರತ

#6. ಜೀವನದ ನುಡಿಮುತ್ತುಗಳು

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು. – ಮಾಸ್ತಿ

ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ. – ರವೀಂದ್ರನಾಥ ಟ್ಯಾಗೋರ್

ವಾಸ್ತವತೆಯ ಜಗತ್ತಿಗೆ ಮಿತಿಯುಂಟು, ಕಲ್ಪನೆಯ ಜಗತ್ತಿಗೆ ಮಿತಿಯಿಲ್ಲ. – ರೂಸೋ

ಉಪದೇಶ ಮಾಡುವವನ ದೋಷ ತಕ್ಷಣ ನಮ್ಮನ್ನು ಆಕರ್ಷಿಸುತ್ತದೆ. – ಲೂಥರ್

ಯಾವುದೇ ಕೆಲಸವನ್ನೇ ಅಗಲಿ ಉತ್ಸಾಹದಿಂದ ಮಾಡಬಲ್ಲವನು ತನ್ನ ಗುರಿಯನ್ನು ಮುಟ್ಟದೇ ಇರಲಾರ. – ವಾಲ್ಮೀಕಿ

ಫಲ ಸಿಕ್ಕುವವರೆಗೆ ಪ್ರಯತ್ನ ಕೈಬಿಡಬಾರದು. – ವಿನೋಬಾ ಭಾವೆ

ನಮ್ಮ ಪಕ್ಕದ ಮನೆಯವರು ಸಜ್ಜನರಾಗಿದ್ದರೆ ನಮ್ಮ ಮನೆಯ ಬೆಲೆ ದುಪ್ಪಟ್ಟಾಗುತ್ತದೆ. – ವಿನೋಬಾ ಭಾವೆ

ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ ‘ದೋಣಿ ತೆಗೆದುಕೊಂಡು ಹೋಗು’ ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ. – ವಿನೋಬಾ ಭಾವೆ

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು. – ವಿನೋಬಾ ಭಾವೆ

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ. – ವಿನೋಬಾ ಭಾವೆ

“ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.” – ವಿನೋಬಾ ಭಾವೆ

ಒತ್ತಡದಲ್ಲಿದ್ದಾಗ ವ್ಯಕ್ತಿಯೊಬ್ಬ ಮಾಡುವ ಆಯ್ಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ. – ವಿನ್ಸ್ಟನ್ ಚರ್ಚಿಲ್ 

ನನ್ನ ಮನದೊಳಗಿರುವ ಧೈರ್ಯವೇ ನನ್ನ ಮಿತ್ರ. – ಷೇಕ್ಸ್‌ಪಿಯರ್

ತಿಳಿದಿರುವುದಕ್ಕಿಂತ ಕಡಿಮೆ ಮಾತನಾಡುವುದು ಬುದ್ಧಿವಂತಿಕೆಯ ಲಕ್ಷಣ. – ವಿಲಿಯಂ ಶೇಕ್ಸ್‌ಪಿಯರ್

ತೀಕ್ಷ್ಣ ಬುದ್ದಿ ಆಧುನಿಕ ಜಗತ್ತಿನಲ್ಲಿ ಅಮೂಲ್ಯ ವರದಾನ. – ಷೇಕ್ಸ್ ಪಿಯರ್

#7. ಸಮಯದ ನುಡಿಮುತ್ತುಗಳು

ಒಳ್ಳೆಯತನದಿಂದ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವವರನ್ನು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. – ಶೇಕ್ಸ್ ಪಿಯರ್

ನೀವು ಎಲ್ಲರಿಂದ ದೂರಾಗಿ ಒಬ್ಬಂಟಿಗರಾಗಿದ್ದರೆ, ನಿಮ್ಮ ಪಾಪದ ಕೃತ್ಯಗಳಿಂದ ಸಂಕಟ ಪಡಬೇಕಾಗುತ್ತದೆ. – ಸಂತ ಕಬೀರ್

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ. – ಸರ್ ಎಂ.ವಿ

ಅನ್ನ ದೇವರ ಮುಂದೆ, ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು ಜಗಕೆ,
ಅನ್ನವೇ ದೈವ ಸರ್ವಜ್ಞ. – ಸರ್ವಜ್ಞ

ಅನ್ನವನು ಇಕ್ಕುವ ಅನ್ಯಜಾತನೆ ಕುಲಜ,
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು,
ಆಡಿ ಕೊಡುವವ ಮಧ್ಯಮನು,
ಅಧಮ ತಾನಾಡಿ ಕೊಡದವನು. – ಸರ್ವಜ್ಞ

ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ. – ಸಿಗ್ಮಂಡ್ ಫ್ರಾಯ್ಡ್

ನಿಮ್ಮ ಬದುಕಿನಲ್ಲಿ ಘಟಿಸುವ ಒಂದು ಸಣ್ಣ ತಪ್ಪು ನಿಮ್ಮಲ್ಲಿ ಪರಿವರ್ತನೆಗೆ ದಾರಿ ತೋರುತ್ತದೆ. – ಹೆನ್ರಿ ಫೋರ್ಡ್

ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ, 

#8. ಸ್ಫೂರ್ತಿದಾಯಕ ನುಡಿಮುತ್ತುಗಳು – ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು

ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು. – ಸ್ವಾಮಿ ವಿವೇಕಾನಂದ

ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ. – ವಿವೇಕಾನಂದ

ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು.- ಸ್ವಾಮಿ ವಿವೇಕಾನಂದ.

ದಾನ ಮಾಡಿರಿ. ಆದರೆ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ. ಅದು ತಾನಾಗಿಯೇ ವಾಪಸ್ ಬರಲಿದೆ. – ಸ್ವಾಮಿ ವಿವೇಕಾನಂದ.

ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ; ಆದರೆ ಯಾವುದಕ್ಕಾದರು ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ. – ಸ್ವಾಮಿ ವಿವೇಕಾನಂದ.

ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ. ಇದು ಉನ್ನತಿಯ ಮೊದಲ ಮೆಟ್ಟಿಲು. ಆದ್ದರಿಂದ ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು. – ಸ್ವಾಮಿ ವಿವೇಕಾನಂದ

ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ. – ಸ್ವಾಮಿ ವಿವೇಕಾನಂದ

ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ.
ಒಳ್ಳೆಯ ಗುರಿಯತ್ತ ನಡೆ .ನಿರ್ಧಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು,
ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು.
– ಸ್ವಾಮಿ ವಿವೇಕಾನಂದ 

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ. – ವಿಚಾರ ಮಾತ್ರ.

ಯಾವುದಕ್ಕೂ ಅಂಜದಿರಿ ; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲ ಭೀತಿಯೇ ಕಾರಣ. – ಸ್ವಾಮಿ ವಿವೇಕಾನಂದ

ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ ” ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು”. – ಸ್ವಾಮಿ ವಿವೇಕಾನಂದ

#9. ಬುದ್ಧ ನುಡಿಮುತ್ತುಗಳು

ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು, ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.- ಭಗವಾನ್ ಬುದ್ಧ

ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ, – ಗೌತಮ ಬುದ್ದ 

ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸಲಿದೆ. – ಭಗವಾನ್ ಬುದ್ಧ

ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ, ಅವರಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲಿದೆ. – ಭಗವಾನ್ ಬುದ್ಧ

#10. ಸುಭಾಷಿತಗಳು

ಕೋಪ ಮಾತಿನಲ್ಲಿರ ಬೇಕು;ಮನಸ್ಸಿನಲ್ಲಲ್ಲ.
ಪ್ರೀತಿ ಮನಸ್ಸಿನಲ್ಲಿರಬೇಕು. ಬರೀ ಮಾತಿನಲ್ಲಲ್ಲ.

ಜೀವನ ನಮಗೆ ಯಾವಾಗಲೂ ೨ನೇ ಅವಕಾಶ ನೀಡುತ್ತದೆ.
ಅದನ್ನೇ ನಾಳೆ ಅನ್ನೋದು.

ನಮಗಾಗದವರ ಕಠಿಣ ಮಾತುಗಳಿಗಿಂತ ನಮ್ಮವರು
ಅನ್ನಿಸಿ ಕೊಂಡವರ ಮೌನವೇ ಹೆಚ್ಚು ದುಃಖ ಕೊಡುತ್ತ
ನೆನಪಿನಲ್ಲಿ ಉಳಿಯುವಂತಾಗುತ್ತದೆ

ವಜ್ರವನ್ನು ವಜ್ರದಿಂದ ಕತ್ತರಿಸಬಹುದು. ಮುಳ್ಳನ್ನು
ಮುಳ್ಳಿನಿಂದ ತೆಗೆಯಬಹುದು. ಆದರೆ, ಕೆಸರನ್ನು ಕೆಸರಿನಿಂದ
ತೊಳೆಯಲು ಸಾಧ್ಯವಿಲ್ಲ. ಅಂತೆಯೇ ತಪ್ಪನ್ನು ತಪ್ಪಿನಿಂದ
ತಿದ್ದಲಾಗದು.

ಕಾಲರಾಯ ಜಗತ್ತನ್ನು ಅನುದಿನವೂ ಭಕ್ಷಿಸುತ್ತಲೇ ಹೋಗುತ್ತಾನೆ,
ಜಗತ್ತು ಅವನ ಆಹಾರ. ಅವನೇ ಜಗತ್ತಿನ ಒಡೆಯ.

ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ.

ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ.

ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. – ಮಹಾಭಾರತ

ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.

“ನಮ್ಮನ್ನು ಪ್ರೀತಿಸುವವರಿದ್ದಾರೆ” ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.

Read More ಕನ್ನಡ ನುಡಿಮುತ್ತುಗಳು – Kannada Nudimuttugalu Here

Conclusion

Kannada Nudimuttugalu is an essential aspect of the Kannada language and its literature. The process of creating new words and expressions has played a significant role in the evolution of the language. Despite the challenges faced in preserving proper Nudimuttugalu, there is hope that the language will continue to evolve and thrive in the years to come.

FAQs

  1. What is Kannada Nudimuttugalu?
  2. What are the types of Nudimuttugalu in Kannada?
  3. Who are some famous Kannada writers known for their use of Nudimuttugalu?
  4. What is the impact of other languages on Kannada Nudimuttugalu?
  5. What is the future of Kannada Nudimuttugalu?