1000+ Proverbs in Kannada- ಕನ್ನಡ ಗಾದೆಗಳು ಗಾದೆ ಮಾತುಗಳು

Here is the list of Proverbs in Kannada ಕನ್ನಡ ಗಾದೆಗಳು ಗಾದೆ ಮಾತುಗಳು – Kannada Gaadegalu. Proverbs are short, pithy sayings that convey wisdom or advice based on common sense or experience. These sayings are typically handed down through generations and are used to teach moral values, cultural norms, and practical knowledge.

Proverbs can be found in many different cultures and languages, with each culture having its own unique set of proverbs. In fact, there are proverbs from virtually every culture and civilization, including ancient Greek, Roman, and Chinese proverbs, as well as proverbs from African, Indian, and Native American cultures. Proverbs can take many different forms. Some are simple one-liners, while others are more complex and may involve imagery or metaphors. For example, the English proverb “A penny saved is a penny earned” is a simple statement that conveys the importance of saving money. Meanwhile, the Chinese proverb “A journey of a thousand miles begins with a single step” uses metaphor to teach the value of perseverance and determination. One of the key characteristics of proverbs is their universality. Because they are based on common sense and experience, proverbs are often applicable in many different situations and can be used to teach people of all ages and backgrounds. They are also often used in literature, poetry, and art to convey a particular message or theme. In addition to their practical value, proverbs can also be seen as a form of cultural heritage. Because they are passed down through generations, they are a way of preserving the wisdom and values of a particular culture or community. Overall, proverbs are an important part of many cultures around the world. They provide a simple yet effective way to convey wisdom and advice, and their universal nature makes them applicable in many different situations. Whether you’re looking for practical advice or cultural insight, proverbs are an excellent resource to turn to.

#1. Proverbs in Kannada – ಕನ್ನಡ ಗಾದೆಗಳು

  1. ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು
  2. ಹತ್ತು ದೇವರನ್ನು ಪೂಜಿಸುವ ಬದಲು ಹೆತ್ತ ತಾಯಿಯನ್ನು ಪೂಜಿಸು
  3. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
  4. ಕೈ ಕೆಸರಾದರೆ ಬಾಯಿ ಮೊಸರು
  5. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
  6. ಹಾಳು
  7. ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
  8. ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
  9. ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
  10. ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
  11. ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
  12. ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
  13. ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
  14. ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
  15. ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
  16. ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
  17. ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
  18. ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
  19. ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
  20. ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
  21. ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
  22. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
  23. ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
  24. ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
  25. ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
  26. ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
  27. ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
  28. ಮೃತ್ಯು ಬಂದ ಮೇಲೆ ವೈದ್ಯ ಬಂದ.
  29. ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
  30. ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
  31. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
  32. ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
  33. ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
  34. ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
  35. ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
  36. ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
  37. ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
  38. ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
  39. ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
  40. ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
  41. ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
  42. ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
  43. ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
  44. ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
  45. ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
  46. ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
  47. ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
  48. ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
  49. ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
  50. ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
  51. ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
  52. ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
  53. ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
  54. ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
  55. ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
  56. ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
  57. ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
  58. ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
  59. ಬೇಸರವಿರಬಾರದು, ಅವಸರ ಮಾಡಬಾರದು.
  60. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
  61. ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
  62. ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
  63. ಗದ್ದೆ ಸುಟ್ಟರೂ ಹಾಳಾಗದು ಗಾದೆ.
  64. ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
  65. ಮಾಟ ಮಾಡಿದೋನ ಮನೆ ಹಾಳು.
  66. ಒಬ್ಬರ ಕೂಳು ಇನ್ನೊಬ್ಬರ ಕುತ್ತು.
  67. ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
  68. ಹೊಳೆಯುವುದೆಲ್ಲಾ ಚಿನ್ನವಲ್ಲ.
  69. ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
  70. ಬರಿಗೈಯವರ ಬಡಿವಾರ ಬಹಳ.
  71. ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
  72. ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
  73. ಅರೆಗೊಡದ ಅಬ್ಬರವೇ ಬಹಳ.
  74. ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
  75. ಆಪತ್ತಿಗಾದವನೇ ನಿಜವಾದ ಗೆಳೆಯ.
  76. ಇಂದಿನ ಸೋಲು ನಾಳಿನ ಗೆಲುವು.
  77. ಧೈರ್ಯವಿದ್ದವನಿಗೆ ದೈವವೂ ಅನುಕೂಲ.
  78. ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
  79. ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
  80. ಉತ್ತಮವಾದ ನಗು ನೇಸರನ ಮಗು.
  81. ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
  82. ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
  83. ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
  84. ಉದ್ದುದ್ದ ಮಾತಿನವರ ಮೊಳಕೈ ಮೊಂಡ.
  85. ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
  86. ನೋಡಿ ನಡೆದವರಿಗೆ ಕೇಡಿಲ್ಲ.
  87. ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
  88. ಚಿಂತೆ ಮಾಡಿದರೆ ಸಂತೆ ಸಾಗೀತೆ?
  89. ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
  90. ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
  91. ತಾಯಿ ಬೇಕು ಇಲ್ಲವೇ ಬಾಯಿ ಬೇಕು.
  92. ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
  93. ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
  94. ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
  95. ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
  96. ಮಂತ್ರಕ್ಕಿಂತ ಉಗುಳೇ ಹೆಚ್ಚು.
  97. ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
  98. ಎಡಗಣ್ಣು ಹೊಡೆದರೆ ನಾರಿಗೆ ಶುಭ.
  99. ಊಟವೆಂದರೆ ಊರು ಬಿಟ್ಟುಹೋದಂತೆ.
  100. ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.

#2. ಗಾದೆ ಮಾತುಗಳು

  1. ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
  2. ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
  3. ಕಣ್ಣಿಗೂ ಮೂಗಿಗೂ ಮೂರು ಗಾವುದ.
  4. ಕಲಹವೇ ಕೇಡಿಗೆ ಮೂಲ.
  5. ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
  6. ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
  7. ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
  8. ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
  9. ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
  10. ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
  11. ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
  12. ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
  13. ಭಾಷೆ ಕೊಟ್ಟವನು ಪೋಷಣೆ ಮಾಡನೇ?
  14. ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
  15. ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
  16. ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
  17. ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
  18. ದುಡಿಯೋ ತನಕ ಮಡದಿ.
  19. ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
  20. ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
  21. ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
  22. ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
  23. ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
  24. ನಾಮವಿದ್ದವನಿಗೆ ಕಾಮ ಕಡಿಮೆಯೇ?
  25. ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
  26. ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
  27. ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
  28. ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
  29. ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ
  30. ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
  31. ಹೂಡಿದರೆ ಒಲೆ, ಮಡಿದರೆ ಮನೆ.
  32. ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
  33. ಪಂಗಡವಾದವ ಸಂಗಡ ಬಂದಾನೆ?
  34. ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
  35. ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
  36. ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
  37. ತೇರಾದ ಮೇಲೆ ಜಾತ್ರೆ ಸೇರಿತು.
  38. ಆಸೆಗೆ ತಕ್ಕ ಪರಿಶ್ರಮ ಬೇಕು.
  39. ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
  40. ಏನಾದರೂ ಆಗು ಮೊದಲು ಮಾನವನಾಗು.
  41. ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
  42. ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
  43. ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
  44. ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
  45. ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
  46. ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
  47. ಟೊಳ್ಳು ಮಾತು ಸುಳ್ಳಿಗಿಂತ ಕಡೆ.
  48. ಠಕ್ಕು ಇರುವವನಿಗೆ ಠಿಕಾಣಿ ಸಿಗದು.
  49. ತೂಕ ಸರಿಯಿದ್ದರೆ ವ್ಯಾಪಾರ.
  50. ನಡೆದಷ್ಟು ನೆಲ, ಪಡೆದಷ್ಟು ಫಲ.
  51. ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
  52. ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
  53. ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
  54. ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
  55. ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
  56. ಸಂತೋಷವೇ ಯೌವನ, ಚಿಂತೆಯೇ ಮುಪ್ಪು
  57. ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
  58. ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
  59. ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
  60. ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
  61. ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
  62. ಕುಲ ಬಿಟ್ಟರೂ ಛಲ ಬಿಡಬೇಡ.
  63. ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
  64. . ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
  65. ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
  66. ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
  67. ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
  68. ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
  69. ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
  70. ಹುಲಿ ಹಸಿದಾಗ ಹುಲ್ಲು ತಿಂದೀತೆ?
  71. ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
  72. ದುರುಳನಿಂದಲೇ ದುರುಳುತನ.
  73. ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
  74. ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
  75. ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
  76. ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
  77. ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
  78. ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
  79. ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
  80. ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
  81. ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
  82. ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
  83. ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
  84. ನಗುವೇ ಆರೋಗ್ಯದ ಗುಟ್ಟು.
  85. ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
  86. ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
  87. ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
  88. ಮುಖ ನೋಡಿ ಮನ ತಿಳಿ.
  89. ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
  90. ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
  91. ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
  92. ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
  93. ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
  94. ಕಳೆದ ದಿನಗಳು ಬರೆದ ಪುಟಗಳಂತೆ.
  95. ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
  96. ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
  97. ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
  98. ಕೆಡುವವರು ಮನೇಲಿದ್ರು ಕೆಡುತ್ತಾರೆ.
  99. ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
  100. ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.

#3. ಕನ್ನಡ ಜನಪ್ರಿಯ ಗಾದೆಗಳು

  1. ನೋಡಿ ನಡೆದಾಗ ಎಡವೋದು ತಪ್ಪುತ್ತೆ.
  2. ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
  3. ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
  4. ರೈತನ ಮುಗ್ಗು ನಾಡಿನ ಕುಗ್ಗು.
  5. ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
  6. ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
  7. ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
  8. ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
  9. ಅಶ್ವಿನೀ ಸಸ್ಯನಾಶಿನೀ.
  10. ಭರಣಿ ಮಳೆ ಧರಣಿ ಬೆಳೆ.
  11. ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
  12. ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
  13. ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
  14. ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
  15. ಸ್ವಾತಿ ಮಳೆ ಮುತ್ತಿನ ಬೆಳೆ.
  16. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
  17. ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
  18. ಚಿತ್ತಾ ಮಳೆ ವಿಚಿತ್ರ ಬೆಳೆ!
  19. ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
  20. ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
  21. ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
  22. ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
  23. ಬಾಳೆ ಬೆಳೆದವ ಬಾಳಿಯಾನು.
  24. ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
  25. ತೋಟ ಮಾಡಿದವನಿಗೆ ಕೋಟಲೆಯಿಲ್ಲ.
  26. ಬಲ್ಲಿದವನಿಗೆ ಕಬ್ಬು.
  27. ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
  28. ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
  29. ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
  30. ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
  31. ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?.
  32. ಶರಣು ಆದವನಿಗೆ ಮರಣವಿಲ್ಲ.
  33. ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
  34. ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
  35. ಮನೆ ಗೆದ್ದು ಮಾರು ಗೆಲ್ಲು.
  36. ಮಾತು ಅಂಗಾರ ಮೌನ ಬಂಗಾರ
  37. ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
  38. ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
  39. ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
  40. ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
  41. ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
  42. ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
  43. ದಯವಿಲ್ಲದ ಧರ್ಮವಿಲ್ಲ.
  44. ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
  45. ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
  46. ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
  47. ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
  48. ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
  49. ಗೆಳೆತನದಲ್ಲಿ ಮೋಸಮಾಡಬೇಡ.
  50. ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
  51. ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
  52. ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
  53. ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
  54. ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
  55. ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
  56. ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
  57. ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
  58. ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
  59. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
  60. ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
  61. ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
  62. ಹಾಲು ಕುಡಿದು ಹಾಗಲಕಾಯಿ ತಿಂದಂತೆ.
  63. ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
  64. ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
  65. ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
  66. ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
  67. ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
  68. ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
  69. ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
  70. ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
  71. ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
  72. ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ
  73. ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
  74. ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
  75. ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
  76. ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
  77. ವಯಸ್ಸಿಗೆ ತಕ್ಕ ಬುದ್ಧಿ ಕಲಿ.
  78. ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
  79. ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
  80. ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
  81. ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
  82. ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
  83. ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
  84. ಹೊರಗೆ ಝಗ ಝಗ, ಒಳಗೆ ಭಗ ಭಗ.
  85. ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
  86. ಮೂಕವೇದನೆಯು ಸತ್ಯಕ್ಕಿಂತ ಮೇಲು.
  87. ಕೃತಿಯಿಲ್ಲದ ಮಾತು, ಕಸ ಬೆಳೆದ ತೋಟವಿದ್ದಂತೆ.
  88. ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
  89. ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
  90. ಅರ್ಧ ಕಲಿತವನ ಆಬ್ಬರ ಹೆಚ್ಚು.
  91. ದೇಶ ತಿರುಗಬೇಕು, ಭಾಷೆ ಕಲಿಯಬೇಕು.
  92. ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
  93. ಅಲ್ಪರ ಸಂಗ ಅಭಿಮಾನ ಭಂಗ.
  94. ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
  95. ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
  96. ಪಡಿತಿಂದು ಗುಡಿಯಲ್ಲಿ ಉರುಳಾಡಿದ.
  97. ನೋಡಿ ನಡೆದವನಿಗೆ ಕೇಡಿಲ್ಲ.
  98. ಪದವೂ ಮುಗಿಯಿತು, ತಂತಿಯೂ ಹರಿಯಿತು
  99. ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
  100. ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.

#4. Kannada Gaadegalu

  1. ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
  2. ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
  3. ಮಂತ್ರ ಸ್ವಲ್ಪ, ಉಗುಳೇ ಬಹಳ.
  4. ಮಾನ ಹೋದ ಮೇಲೆ ಮರಣ ಬಂದ ಹಾಗೆ.
  5. ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
  6. ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
  7. ಬಾಯಿ ಬಂಗಾರ, ಮನ ಅಂಗಾರ.
  8. ಬಾಯಿಯಿದ್ದ ಮಗ ಬದುಕುವನು.
  9. ಭಾರವಾದ ಪಾಪಕ್ಕೆ ಘೋರವಾದ ನರಕ.
  10. ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
  11. ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
  12. ಕಲಿತವನಿಗಿಂತ ನುರಿತವನೇ ಮೇಲು.
  13. ಕಷ್ಟದಂತೆ ಫಲ, ಮನದಂತೆ ಮಹಾದೇವ.
  14. ಕೀಟ ಸಣ್ಣದಾದರೂ ಕಾಟ ಬಹಳ.
  15. ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
  16. ಕೂಳಿಗೆ ಮೂಲ ಭೂಮಿಗೆ ಭಾರ.
  17. ಕೇಳುವವರ ಮುಂದೆ ಹೇಳುವವರು ದಡ್ಡರು.
  18. ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
  19. ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
  20. ಹಸಿದವನಿಗೆ ಹಳಸಿದ್ದೇ ಪಾವನ.
  21. ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
  22. ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
  23. ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
  24. ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
  25. ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
  26. ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
  27. ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
  28. ಆಸೆಯೇ ಜೀವನ, ಜೀವನವೇ ಆಸೆ.
  29. ಎಡವಿದ ಕಾಲೇ ಎಡವುದು ಹೆಚ್ಚು.
  30. ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
  31. ಎಣ್ಣೆ ಬರುವಾಗ ಗಾಣ ಮುರೀತು.
  32. ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
  33. ಇಲಿ ಬೇಟೆಗೆ ತಮಟೆ ಬಡಿದಂಗೆ.
  34. ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
  35. ಕಡಲೆ ತಿಂದು ಕೈತೊಳೆದ ಹಾಗೆ.
  36. ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
  37. ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
  38. ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
  39. ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
  40. ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
  41. ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
  42. ಮದುವೆ ಸಾಲ ಮಸಣಾದವರೆಗೂ.
  43. ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
  44. ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
  45. ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
  46. ಕುಡಿಗೆ ಕುಂಬಳಕಾಯಿ ಭಾರವೇ?
  47. ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
  48. ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
  49. ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
  50. ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
  51. ಆತ್ಮೀಯವಾದ ಪ್ರೇಮ ಅಮರವಾದದ್ದು.
  52. ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
  53. ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
  54. ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
  55. ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
  56. ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
  57. ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
  58. ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
  59. ಕತ್ತೆಗೆ ತಿಪ್ಪೆಯೇ ತವರುಮನೆ.
  60. ಕತ್ತೆಗೆ ಯಾಕೆ ಹತ್ತಿಕಾಳು?
  61. ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
  62. ಕತ್ತೆಯಾಗಬೇಡ ಕಾಗೆಯಾಗು.
  63. ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
  64. ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
  65. ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
  66. ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
  67. ಅರಿತರೆ ಮಾತನಾಡು, ಮರೆತರೆ ಕೂತು ನೋಡು.
  68. ಆಕಾಶ ನೋಡೋಕೆ ನೂಕಾಟವೇಕೆ?
  69. ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
  70. ಜಾರುವುದು ತಪ್ಪಿದರೆ ಏರುವುದು ಸಾಧ್ಯ.
  71. ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
  72. ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
  73. ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
  74. ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
  75. ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
  76. ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
  77. ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?
  78. ಹಿತ್ತಲ ಗಿಡ ಮದ್ದಲ್ಲ.
  79. ಮಾಡಿದ್ದುಣ್ಣೋ ಮಹರಾಯ.
  80. ಕೈ ಕೆಸರಾದರೆ ಬಾಯಿ ಮೊಸರು.
  81. ಹಾಸಿಗೆ ಇದ್ದಷ್ತು ಕಾಲು ಚಾಚು.
  82. ಅOಗೈ ಹುಣ್ಣಿಗೆ ಕನ್ನಡಿ ಬೇಕೆ.
  83. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರOತೆ.
  84. ಎತ್ತೆಗೆ ಜ್ವರ ಬOದರೆ ಎಮ್ಮೆಗೆ ಬರೆ ಎಳೆದರOತೆ.
  85. ಮನೇಲಿ ಇಲಿ, ಬೀದೀಲಿ ಹುಲಿ.
  86. ಕುOಬಳಕಾಯಿ ಕಳ್ಳ ಅOದರೆ ಹೆಗಲು ಮುಟ್ಟಿ ನೋದಿಕೊOಡನOತೆ.
  87. ಕಾರ್ಯಾವಾಸಿ ಕತ್ತೆಕಾಲು ಹಿಡಿ.
  88. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
  89. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
  90. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
  91. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
  92. ಅಕ್ಕಿ ಮೇಲೆ ಆಸೆ, ನೆOಟರ ಮೇಲೂ ಪ್ರೀತಿ.
  93. ಅಜ್ಜಿಗೆ ಅರಿವೆ ಚಿOತೆ, ಮಗಳಿಗೆ ಗOಡನ ಚಿOತೆ.
  94. ಅಲ್ಪನಿಗೆ ಐಶ್ವರ್ಯ ಬOದರೆ ಅರ್ಧರಾತ್ರೀಲಿ ಕೊಡೆ ಹಿಡಿದನOತೆ.
  95. ಅತ್ತೆಗೊOದು ಕಾಲ ಸೊಸೆಗೊOದು ಕಾಲ.
  96. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
  97. ಬೇಲೀನೆ ಎದ್ದು ಹೊಲ ಮೇಯ್ದOತೆ.
  98. ಅOಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
  99. ಅOತು ಇOತು ಕುOತಿ ಮಕ್ಕಳಿಗೆ ಎOತೂ ರಾಜ್ಯವಿಲ್ಲ.
  100. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

#5. Kannada Gaade Mathugalu

  1. ಚಿOತೆ ಇಲ್ಲದವನಿಗೆ ಸOತೆಯಲ್ಲೂ ನಿದ್ದೆ.
  2. ದೇವರು ವರ ಕೊಟ್ರು ಪೂಜಾರಿ ಕೊಡ.
  3. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
  4. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
  5. ಎತ್ತು ಈಯಿತು ಅOದರೆ ಕೊಟ್ಟಿಗೆಗೆ ಕಟ್ಟು ಎOದರOತೆ.
  6. ಗOಡ ಹೆOಡಿರ ಜಗಳ ಉOಡು ಮಲಗೋ ತನಕ.
  7. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
  8. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
  9. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
  10. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನOತೆ.
  11. ಭOಗಿದೇವರಿಗೆ ಹೆOಡುಗುಡುಕ ಪೂಜಾರಿ.
  12. ಕಾಸಿಗೆ ತಕ್ಕ ಕಜ್ಜಾಯ.
  13. ಸಾವಿರ ಸುಳ್ಳು ಹೇಳಿ ಒOದು ಮದುವೆ ಮಾಡು.
  14. ಕೂಸು ಹುಟ್ಟುವ ಮುOಚೆ ಕುಲಾವಿ.
  15. ಅವರು ಚಾಪೆ ಕೆಳಗೆ ತೂರಿದರೆ ನೀನು ರOಗೋಲಿ ಕೆಲಗೆ ತೂರು.
  16. ಇಬ್ಬರ ಜಗಳ ಮೂರನೆಯವನಿಗೆ ಲಾಭ.
  17. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
  18. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.
  19. ಉಚ್ಚೇಲಿ ಮೀನು ಹಿಡಿಯೋ ಜಾತಿ.
  20. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮOದಿರು, ಬೆಳಿತಾ ಬೆಳಿತಾ ದಾಯಾದಿಗಳು.
  21. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
  22. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
  23. ಅOಗೈಯಲ್ಲಿ ಬೆಣ್ಣೆ ಇಟ್ಕೊOಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರOತೆ.
  24. ಶುಭ ನುಡಿಯೋ ಸೋಮ ಅOದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅOದ ಹಾಗೆ.
  25. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
  26. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
  27. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
  28. ಮಾತು ಬೆಳ್ಳಿ, ಮೌನ ಬOಗಾರ.
  29. ಎಲ್ಲಾರ ಮನೆ ದೋಸೆನೂ ತೂತೆ.
  30. ಒಲ್ಲದ ಗOಡನಿಗೆ ಮೊಸರಲ್ಲೂ ಕಲ್ಲು.
  31. ಅಡುಗೆ ಮಾಡಿದವಳಿಗಿOತ ಬಡಿಸಿದವಲೇ ಮೇಲು.
  32. ತಾಯಿಯOತೆ ಮಗಳು ನೂಲಿನOತೆ ಸೀರೆ.
  33. ಅನುಕೂಲ ಸಿOಧು, ಅಭಾವ ವೈರಾಗ್ಯ.
  34. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
  35. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
  36. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
  37. ಮನೆಗೆ ಮಾರಿ, ಊರಿಗೆ ಉಪಕಾರಿ.
  38. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
  39. ಅಲ್ಪರ ಸOಘ ಅಭಿಮಾನ ಭOಗ.
  40. ಸಗಣಿಯವನ ಸ್ನೇಹಕ್ಕಿOತ ಗOಧದವನ ಜೊತೆ ಗುದ್ದಾಟ ಮೇಲು.
  41. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
  42. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
  43. ಗೋರ್ಕಲ್ಲ ಮೇಲೆ ನೀರು ಸುರಿದOತೆ.
  44. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
  45. ಗಾಳಿ ಬOದಾಗ ತೂರಿಕೋ.
  46. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
  47. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
  48. ಬಿರಿಯಾ ಉOಡ ಬ್ರಾಹ್ಮಣ ಭಿಕ್ಷೆ ಬೇಡಿದ.
  49. ದುಡ್ಡೇ ದೊಡ್ಡಪ್ಪ. ವಿದ್ಯೆಯೇ ಅದರಪ್ಪ.
  50. ಬರಗಾಲದಲ್ಲಿ ಅಧಿಕ ಮಾಸ.
  51. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
  52. ಎಣ್ಣೆ ಬOದಾಗ ಕಣ್ಣು ಮುಚ್ಚಿಕೊOಡ ಹಾಗೆ
  53. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
  54. ಮOತ್ರಕ್ಕಿOತ ಉಗುಳೇ ಜಾಸ್ತಿ.
  55. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
  56. ಕುOಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  57. ಕOತೆಗೆ ತಕ್ಕ ಬೊOತೆ.
  58. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
  59. ಅOಕೆ ಇಲ್ಲದ ಕಪಿ ಲOಕೆ ಸುಟ್ಟಿತು.
  60. ಓದಿ ಓದಿ ಮರುಳಾದ ಕೂಚOಭಟ್ಟ.
  61. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
  62. ಕೋಟಿ ವಿದ್ಯೆಗಿOತ ಮೇಟಿ ವಿದ್ಯೆಯೇ ಮೇಲು.
  63. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
  64. ಓದುವಾಗ ಓದು, ಆಡುವಾಗ ಆಡು.
  65. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
  66. ಸOಸಾರ ಗುಟ್ಟು, ವ್ಯಾಧಿ ರಟ್ಟು.
  67. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರOತೆ.
  68. ಕೊಟ್ಟವನು ಕೋಡOಗಿ, ಇಸ್ಕೊOಡೋನು ಈರಭದ್ರ.
  69. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
  70. ಮುಖ ನೋಡಿ ಮಣೆ ಹಾಕು.
  71. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರOತೆ.
  72. ಮOತ್ರಕ್ಕೆ ಮಾವಿನಕಾಯಿ ಉದುರತ್ಯೇ ?
  73. ತುOಬಿದ ಕೊಡ ತುಳುಕುವುದಿಲ್ಲ.
  74. ಉಪ್ಪಿಗಿOತ ರುಚಿಯಿಲ್ಲ ತಾಯಿಗಿOತ ದೇವರಿಲ್ಲ.
  75. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
  76. ಇರಲಾರದೆ ಇರುವೆ ಬಿಟ್ಟುಕೊOಡ ಹಾಗೆ.
  77. ಎOಜಲು ಕೈಯಲ್ಲಿ ಕಾಗೆ ಓಡಿಸದI ಬುದ್ಧಿ.
  78. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊOಡರು.
  79. ಒಂದೇ ಮಳೆಗೆ ಒಂದು ಕೊಡೆ ಹರಿಯಬಾರದು
  80. ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
  81. ತಾನು ಕೆಟ್ಟು ಇರಬಹುದು; ತವರು ಕೆಟ್ಟು ಇರಲಾಗದು
  82. ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ?
  83. ಅಮಟೆ ಮರ ಅಪ್ಪನ ಮನೆಗೆ ಹೋದಂತೆ.
  84. ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
  85. ಅಜ್ಜಿ ಮುದುಕಿಯ ಕೋಳಿ ಕೂಗದೆಯೇ ಬೆಳಗಾಗುತ್ತದೆ.
  86. ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
  87. ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ
  88. ಹೂವಲ್ಲದಿದ್ದರೆ ಹೂವಿನ ಎಸಳು.
  89. ಬೆಲ್ಲವಿಲ್ಲದಿದ್ದರೂ ಬೆಲ್ಲದಂಥಾ ಮಾತು
  90. ಅಜ್ಜ ಊರಿದ್ದಕ್ಕೂ ಮೊಮ್ಮಗ ಹಾರಿದ್ದಕ್ಕೂ ಸಮ.
  91. ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ
  92. ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ
  93. ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
  94. ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು
  95. ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
  96. ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
  97. ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು.
  98. ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
  99. ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
  100. ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.

#6. 100 ಗಾದೆ ಮಾತುಗಳು

  1. ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
  2. ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು.
  3. ಬೇರೆಯವರ ಹೆಳೆ, ತನ್ನ ಬೆಳೆ
  4. ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
  5. ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
  6. ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು
  7. ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
  8. ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು.
  9. ಪಾತ್ರೆಯಲ್ಲಿದ್ದರೆ ಸೌಟಿಗೆ ಬರುತ್ತದೆ.
  10. ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.
  11. ನನಗೇ ಮದುವೆ ಬೇಡ ನಮ್ಮಪ್ಪ ಯಾರಿಗೆ ಹೆಣ್ಣು ಕೇಳುತ್ತಾನೆ?
  12. ಕೊರಕ್ಲಜ್ಜಿಯ ಮನೆಯ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಂತೆ.
  13. ‘ಸು’ ಅಂದರೆ ಸುಕನುಂಡೆ ಅಂದಿದ್ದ.
  14. ಸಲಿಗೆ ಕೊಟ್ಟರೆ ನಾಯಿ ಸೊಟ್ಟಗ ನೆಕ್ಕಿತ್ತು.
  15. ಸಲಿಗೆ ಕೊಟ್ಟರೆ ನಾಯಿ ನೊಸಲು (ಹಣೆ) ನೆಕ್ಕಿತ್ತು
  16. ಮುಂಗೈ ಕೊಟ್ಟರೆ ಅಂಗೈಯನ್ನೇ ಹಿಡಿಯುತ್ತಾರೆ
  17. ಹಾಡು ಹೇಳಿದವರಿಗೂ ಮೂರು ಸುಕನುಂಡೆ, ಹಾಡು ಹೇಳದಿದ್ದವರಿಗೂ ಮೂರು ಸುಕನುಂಡೆ.
  18. ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ, ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
  19. ಸಡಗರದಲ್ಲಿ ಸರಸಕ್ಕ ಮೈನೆರೆದಿದ್ದಳು.
  20. ಹೊತ್ತಲ್ಲದ ಹೊತ್ತಿನಲ್ಲಿ ತೊತ್ತು ಮೈನೆರೆದಿದ್ದಳು.
  21. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.
  22. ಶನಿ ಹಿಡಿದು ಸಂತೆಗೆ ಹೋದರೆ ಇಲಿ ಹಿಡಿದು ತಲೆ ಬೋಳಿಸಿತ್ತು
  23. ಹೇಳೋದ್ರಲ್ಲೇ ಕಾಶಿ ಕಂಡ ತಿನ್ನೋದೆಲ್ಲಾ ಮಶಿಕೆಂಡ.
  24. ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ
  25. ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.
  26. ಗಂಡ ಸತ್ತ ದುಃಖವಲ್ಲದೇ, ಬಡ್ದು ಕೂಪಿನ ಉರಿ ಬೇರೆ.
  27. ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಬದುಕು ನೋಡದೆ ಹೋಯಿತು.
  28. ಬೇಡವೆಂದು ಎಸೆಯುವ ಕಡ್ಡಿ ಹಲ್ಲಿನಲ್ಲಿ ಹಾಕುವುದಕ್ಕಾದರೂ ಬೇಕಾಗುತ್ತದೆ.
  29. ಭಟ್ಟರ ಅಂಗವಸ್ತ್ರ ಆಗಬಾರದು, ವೈದ್ಯನ ಹೆಂಡತಿ ಆಗಬಾರದು.
  30. ತಲೆಗೆ ಮಿಂದರೆ ಕಾಲಿಗೆ ಬರುತ್ತದೆ.
  31. ಜೇನು ಕೊಯ್ದವನು ಕೈ ನೆಕ್ಕದೇ ಇರುತ್ತಾನಾ?
  32. ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ.
  33. ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಸಾಲದು ಎಂದಿದ್ದಳು.
  34. ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ.
  35. ಜುಟ್ಟು ಹಣ್ಣಾಗಿದೆ ಜಾಗಟೆ ಬಾರಿಸಲು ಬರುವುದಿಲ್ಲ ಎಂದಿದ್ದ.
  36. ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ ಓತಿಕ್ಯಾತ ತಾನು ಮಾಡುತ್ತೇನೆ ಎನ್ನುತ್ತಿತ್ತು.
  37. ಮುಳುಗಿಕೊಂಡು ಹೇತರೂ ತಲೆಯ ಮೇಲೆಯೇ ತೇಲುತ್ತದೆ.
  38. ಮೂರು ಲೋಕವೂ ಕಾಣುತ್ತಿದೆ ಏನು ಹೇಳುತ್ತಿದ್ದಾಗ, ನಮ್ಮ ಮನೆಯ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದ.
  39. ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ
  40. ಬಾಯಿ ಮುಂದಿನ ಹಲ್ಲು, ಊರ ಹೊರಗಿನ ಜಮೀನು ಇವೆರಡರಿಂದಲೂ ಅನಾನುಕೂಲವೇ ಜಾಸ್ತಿ.
  41. ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು.
  42. ಹೆಣ ಹೊರುವವನಿಗೆ ‘ಏನೋ’ ಭಾರವಾ?
  43. ಎತ್ತು ಹೌದು, ಕೋಡು ಅಲ್ಲ.
  44. ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
  45. ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು.
  46. ಗಾದೆ ಹೇಳುವವನ ಬಾಯಿಗೆ ಬೂದಿ ಬೀಳುತ್ತದೆ.
  47. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ.
  48. ಮುಂಡೆಯ ಮದುವೆಗೆ ಮುನ್ನೂರು ವಿಘ್ನ.
  49. ಮುನ್ನೋಡಿ ಪಾಯಸ ಉಣ್ಣೋ ಮೂಳಾ ಎಂದರೆ ಯಾವ ಹೊಲದ ಗಸಗಸೆ ಎಂದು ಕೇಳಿದ.
  50. ಮೂರು ದೋಸೆ ಕೊಡುತ್ತೇನೆ ಹಾಡು ದಾಸಯ್ಯ, ಆರು ದೋಸೆ ಕೊಡುತ್ತೇನೆ ನಿಲ್ಲಿಸು ದಾಸಯ್ಯ.
  51. ಬಿಸಿಯ ಹೊರತೂ ಬೆಣ್ಣೆ ಕರಗುವುದಿಲ್ಲ.
  52. ಹೆದ್ದಿನಿಸು ಹಿತ್ತಲಿಗೆ ಬಳಿ ಎಣ್ಣೆ ಬಚ್ಚಲಿಗೆ.
  53. ಹಣ ಇದ್ದರೂ ಋಣ ಇದ್ದಷ್ಟೇ ತಿನ್ನುತ್ತಾರೆ.
  54. ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ; ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
  55. ಊರ ಉಪಕಾರಕ್ಕೆ ಹೋಗಿ ಮುಲ್ಲಾ ಸೊರಗಿದ್ದ.
  56. ಆನು, ಮಾಣಿ, ಗೋವಿಂದ.
  57. ಆದಷ್ಟು ಆಯಿತು ಮಾದೇವ ಭಟ್ಟರ ಪುರಾಣ.
  58. ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.
  59. ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು/ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
  60. ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.
  61. ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳುವ ಹಾಗಿದೆ.
  62. ಹೊಗಳಿದ ಎಮ್ಮೆ ಹೋರಿಗರು ಹಾಕಿತ್ತು.
  63. ಹೊಗಳಿದ ಎಮ್ಮೆಯ ಮಜ್ಜಿಗೆ ಹುಳಿ ನಾರಿತ್ತು
  64. ಕಂಡಿದ್ದು ಹೇಳೋ ಪಾರುಪತ್ಯಗಾರ ನನ್ನ ಮಠದಲ್ಲಿರಬೇಡ.
  65. ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು.
  66. ಕಲ್ಲಪ್ಪ ಗುಂಡಪ್ಪರ ನಡುವೆ ಕಾಯಪ್ಪ ಚಟ್ನಿಯಾಗಿ ಹೋದ.
  67. ಕಡ ಹುಟ್ಟಿ ಬಡವ ಕೆಟ್ಟ.
  68. ಕತ್ತಿಯ ಮೇಲೆ ಕುಂಬಳ ಕಾಯಿ ಬಿದ್ದರೂ ಒಂದೇ ಕುಂಬಳ ಕಾಯಿಯ ಮೇಲೆ ಕತ್ತಿ ಬಿದ್ದರೂ ಒಂದೇ.
  69. ಕದ್ದವನು ಯಾರು? ಎಂದರೆ ಕಾನುಗೋಡು ಸುಬ್ಬ.
  70. ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.
  71. ಅಜ್ಜಿ ಸುಟ್ಟ ಹಾಗೂ ಆಯಿತು, ಚಳಿ ಕಾಯಿಸಿದ ಹಾಗೂ ಆಯಿತು.
  72. ಊರ ಮುಂದೆ ಹೊಡೆದು ಒಲೆ ಮುಂದೆ ಎಣ್ಣೆ ಹಚ್ಚಿದಂತೆ.
  73. ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.
  74. ಕೋಲು ಕೊಟ್ಟು ಹೊಡೆಸಿಕೊಂಡಂತೆ/ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.
  75. ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.
  76. ಹೊಟ್ಟು ಗಡಿಗೆ, ಹುಳುಕು ತೊಗರಿ
  77. ಕುರುಡ ಕತ್ತ ಹೊಸೆದಂತೆ.
  78. ಕೆಪ್ಪಳಾದರೂ ನಮ್ಮೊಳೇ ವಾಸಿ.
  79. ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಸುಟ್ಟುಹಾಕಿದ್ದಳು.
  80. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ದಾಸಯ್ಯನ ಜಾಗಟೆಗೆ ಹೆದರುತ್ತೀನಾ?
  81. ಕರಡಿಗೇ ಹೆದರದವನು ನಾನು, ಕರಿ ಕಂಬಳಿಗೆ ಹೆದರುತ್ತೀನಾ?
  82. ಅರಿಯೆನೆಂದರೆ ಅರವತ್ತು ಗುಣ, ಬಲ್ಲೆನೆಂದರೆ ಹೋಯ್ತವನ ಹೆಣ.
  83. ಗುಡ್ಡ ಅಗೆದು ಇಲಿ ಹುಡುಕಿದಂತೆ.
  84. ಗುರು ಕೊಟ್ಟ ಜೋಳಿಗೆಯೆಂದು ಗೂಟಕ್ಕೆ ನೇತು ಹಾಕಿದರೆ ಭಿಕ್ಷೆ ಬಂದು ಬೀಳುವುದಿಲ್ಲ.
  85. ಗಂಗಾಳ ತೊಳೆಯಲು ಮಂಗಳ ವಾರವೇ ಏಕೆ ಬರಬೇಕು?
  86. ಮೊಳ ನೇಯುವಷ್ಟರಲ್ಲಿ ಮಾರು ಹೋಗಿತ್ತು.
  87. ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತಿ ಒಗೆದಿದ್ದ.
  88. ಕುರುಡನಿಗೆ ಕಣ್ಣು ಬಂದಿದ್ದೇ ಗೊತ್ತು.
  89. ಕಂಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ.
  90. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದ್ದನು.
  91. ಒಕ್ಕಣ್ಣರ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು.
  92. ಮೊದಲಿದ್ದವಳೇ ಒಳ್ಳೆಯವಳು ಎಬ್ಬಿಸಿದರಾದ್ರೂ ಉಣ್ಣೋಳು.
  93. ಭತ್ತ ತಿನ್ನುವವನು ಹೋದರೆ ಉಮಿ ತಿನ್ನುವವನು ಬರುತ್ತಾನೆ
  94. ಮುದುಕಿಯ ತುಪ್ಪ ಮೂಸಿ ನೋಡಿಯೇ ಖರ್ಚಾಗಿತ್ತು.
  95. ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು.
  96. ಮುರುಕು ಮಂಚ ಹೊತ್ತು ದನ ಕಾಯುತ್ತೀಯಾ ಅಥವಾ ಒಡಕು ಗಡಿಗೆಯಲ್ಲಿ ನೀರು ತರುತ್ತೀಯಾ?
  97. ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು.
  98. ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಮಗುಚಿದ್ದನು.
  99. ಉದ್ಯೋಗ ಇಲ್ಲದ ಆಚಾರಿ ಮಗನ ಕುಂಡೆ ಕೆತ್ತಿ ಮೂರು ಮಣೆ ಮಾಡಿದ್ದನಂತೆ.
  100. ಎಣ್ಣೆ ಬರುವ ಹೊತ್ತಿಗೆ ಕಣ್ಣು ಮುಚ್ಚಿಕೊಂಡಿದ್ದನು.

#7. ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

  1. ಅಕ್ಕ ತಂಗಿಯರು ಕಾಶಿಗೆ ಹೋದಂತೆ.
  2. ಮುಂಡೆಗೆ ಮುಂಡೆಯನ್ನು ಕಂಡರೆ ಉಂಡಷ್ಟೇ ಸಂತೋಷ.
  3. ಹೆಂಡತಿ ಸತ್ತ ದುಃಖ, ಮೊಣಕೈ ಗಂಟಿನ ನೋವು ಬಹಳ ಕಾಲ ಇರುವುದಿಲ್ಲ.
  4. ತಾನು ಮಾಡುವ ಭಾಗ್ಯಕ್ಕೆ ನಡು ಕಾನಿಗೆ ಹೋಗಿದ್ದನು.
  5. ಬಾಗಿಲು ಹಾಕಿದರೆ ಒಂದೇ ದೂರು, ಬಾಗಿಲು ತೆಗೆದರೆ ನಾ ನಾ ದೂರು.
  6. ಹೆಳೆ(ನೆಪ) ಇಲ್ಲದೇ ಅಳುವವನ ಹೆಂಡತಿ ಸತ್ತು ಹೋಗಿದ್ದಳಂತೆ.
  7. ಅಳುವವನ ಮೈಮೇಲೆ ಗೋಡೆ ಬಿದ್ದಂತೆ
  8. ಮಗಳೇ ಮಗಳೇ ಎಂದರೆ ಮನೆಯಿಡೀ ತೆವಳಿದ್ದಳು.
  9. ಮಾಡುವವರನ್ನು ಕಂಡರೆ ನೋಡು ನನ್ನ ಸೇವೆ
  10. ಹಾಕು ಮಣೆ, ನೂಕು ಮಣೆ, ತೋರು ಮಣೆ.
  11. ಹೋಗು ಎನ್ನಲಾರದೇ ಹೊಗೆ ಹಾಕಿದರು
  12. ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಮಾಡಿತ್ತು.
  13. ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.
  14. ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು.
  15. ನಾವೇ ಸಾಯಬೇಕು ಸ್ವರ್ಗ ಕಾಣಬೇಕು.
  16. ನಮ್ಮ ತಲೆಗೆ ನಮ್ಮ ಕೈ
  17. ನಮಗೆ ನಾವು, ಗೋಡೆಗೆ ಮಣ್ಣು
  18. ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.
  19. ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.
  20. ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.
  21. ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.
  22. ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ.
  23. ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತ್ತು.
  24. ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು
  25. ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.
  26. ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.
  27. ದಾನಕ್ಕೆ ಬಂದ ಎಮ್ಮೆಯನ್ನು ಹಲ್ಲು ಹಿಡಿದು ನೋಡಿದ್ದನು.
  28. ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.
  29. ಕುನ್ನಿಗೆ ಕೆಲಸವಿಲ್ಲ ಕುಳಿತುಕೊಳ್ಳಲು ಪುರಸೊತ್ತಿಲ್ಲ/
  30. ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.
  31. ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು
  32. ಅರಸ ಬರುವ ತನಕ ಹಲಸು ತಡೆಯುವುದಿಲ್ಲ.
  33. ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.
  34. ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.
  35. ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆದ.
  36. ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.
  37. ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.
  38. ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.
  39. ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.
  40. ಅಪ್ಪನಿಗೇ ಅಪ್ಪ ಎನ್ನುವುದಿಲ್ಲ ಚಿಕ್ಕಪ್ಪನಿಗೆ ಅಪ್ಪ ಎನ್ನುತ್ತಾನಾ?
  41. ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ…
  42. ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.
  43. ಉಂತೇ ಸಾಯುವ ಮುದುಕಿಯನ್ನು ಒನಕೆಯಲ್ಲಿ ಹೊಡೆದು ಕೊಂದಂತೆ.
  44. ತಿಥಿ ಮನೆಯಲ್ಲಿ ಉಂಡ ಭಟ್ಟ ಹುಲ್ಲು ಗೊಣಬೆಗೆ ಬೆಂಕಿ ಹಾಕಿದ್ದನಂತೆ.
  45. ತೆರೆ ಕಳೆದು ಸಮುದ್ರ ಮುಳುಗಿದಂತೆ.
  46. ಕದ ತಿನ್ನುವವನಿಗೆ ಹಪ್ಪಳ ಈಡಾ?
  47. ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
  48. ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು
  49. ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ರಂಡೆ, ಮು0ಡೇರಾ ಎಂದಳು
  50. ಶಾಲೆ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ.
  51. ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.
  52. ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.
  53. ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.
  54. ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ
  55. ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.
  56. ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.
  57. ಅಜ್ಜ ತಿನ್ನುವ ಕಬ್ಬು ರಸದಾಳಿ.
  58. ನನ್ನನ್ನು ಕಾಡುವ ದೆವ್ವ ನೆರೆಮನೆ ಬೊಮ್ಮಕ್ಕನನ್ನು ಕಾಡು.
  59. ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.
  60. ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.
  61. ಕೇಳದೆಯೇ ಕುದುರೆ ಕೊಟ್ಟ ಕೇಳಿದರೆ ಹೆಂಡತಿಯನ್ನೂ ಕೊಡುತ್ತಾನೆ.
  62. ಆಲದ ಮರವನ್ನು ನೋಡುತ್ತೀಯಾ? ಬ್ರಹ್ಮರಾಕ್ಷಸನನ್ನು ನೋಡುತ್ತೀಯಾ?
  63. ಉಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.
  64. ಪುಕ್ಕಟೆ ಸಿಗುವುದಿದ್ದರೆ ನನಗೊಂದಿರಲಿ, ನನ್ನ ಅಪ್ಪನಿಗೊಂದಿರಲಿ.
  65. ಮದುವೆಯಾಗೋ ಬ್ರಹ್ಮಚಾರಿ ಅಂದರೆ ನೀನೇ ಹೆಂಡತಿಯಾಗು ಅಂದ.
  66. ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.
  67. ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.
  68. ಕಟಕಟೆಯ ದೇವರಿಗೆ ಮರದ ಜಾಗಟೆ.
  69. ಇಷ್ಟು ಕ0ಡ್ಯಾ (ಕಂಡೆಯಾ) ವಿಷ್ಣು ಭಟ್ಟ ಮುಪ್ಪಿನ ಕಾಲಕ್ಕೆ ಮೂರು ಹೆ೦ಡ್ರು.
  70. ಕರುವಿನ ಹಾರಾಟ ಗೂಟದ ಕೆಳಗೆ.
  71. ಸುಟ್ಟೇವು ಸುಡುವ ಮುದುಕಿಗೆ ಸಿಂಬಳ ತೆಗೆಯಲು ಇನ್ನೊಬ್ಬಳು.
  72. ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.
  73. ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.
  74. ಹಾರುವ ಮಂಗಕ್ಕೆ ಏಣಿ ಹಾಕಿ ಕೊಟ್ಟಂತೆ.
  75. ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.
  76. ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.
  77. ಮನೆ ದೇವರೇ ಮಣ್ಣು ತಿನ್ನುತ್ತಿರುವಾಗ ಮಾರಿಯಮ್ಮ ಹೋಳಿಗೆ ಕೇಳಿದ್ದಳು.
  78. ಗುರುವಿಗೇ ಗುಟುಕು ನೀರು ಶಿಷ್ಯನಿಗೆಲ್ಲಿಂದ ಎಣ್ಣೆ ಮಜ್ಜನ?
  79. ಗಂಡ ರಂಡೆ ಎಂದರೆ ಘಟ್ಟದ ಕೆಳಗಿನ ಭಟ್ಟನೂ ಹೇಳುತ್ತಾನೆ.
  80. ಮನೆಯಲ್ಲಿ ಗದ್ದಲ ಎಂದು ಮಂಜುಗುಣಿ ತೇರಿಗೆ ಹೋಗಿದ್ದನಂತೆ.
  81. ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡಿದ್ದನು.
  82. ಮಾಣಿ, ಗೋಣಿ, ಓಣಿ ಈ ಮೂರು ಸಿಗದಿದ್ದರೆ ನಾಯಿ ಮೂರೂ ಮುಕ್ಕಾಲು ಘಳಿಗೆಯಲ್ಲಿ ಕಾಶಿಗೆ ಹೋಗುತ್ತಿತ್ತು.
  83. ಮಾಡುವ ಕೆಲಸ ಬಿಟ್ಟು ಹಾಡುವ ದಾಸಯ್ಯನ ಜೊತೆ ಹೋಗಿದ್ದಳು.
  84. ಹೊಳೆಗೆ ಮೂರು ಮಾರು ಇರುವಾಗಲೇ ಚಲ್ಲಾಣ ಮೇಲೇರಿಸಿದ್ದ.
  85. ಕುದುರೆ ಕಂಡರೆ ಕಾಲು ನೋವು.
  86. ಹೊತ್ತುಕೊಂಡು ಹೋಗುವವರಿದ್ದರೆ ಸತ್ತವರಂತೆ ಬಿದ್ದೇನು
  87. ತಾಯಿ ಕಂಡರೆ ತಲೆ ಬೇನೆ.
  88. ಸುಖ ಹೆಚ್ಚಾಗಿ ಶಾನೂಭೋಗನನ್ನು ಬಯಸಿದ್ದಳು.
  89. ಅಗ್ಗಕ್ಕೆ ಮುಗ್ಗಿದ ಜೋಳ.
  90. ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲ.
  91. ಸಣ್ಣ ಹುಣ್ಣಿಗೆ ಸಣ್ಣ ಕ್ವಾಟಲೆ; ದೊಡ್ಡ ಹುಣ್ಣಿಗೆ ದೊಡ್ಡ ಕ್ವಾಟಲೆ.
  92. ಭಟ್ಟನ ಮಗಳಿಗೆ ಹುಟ್ಟಲು ದಿನವಿಲ್ಲ.
  93. ಉಂಡಾತಾ ಕೇಳಿದರೆ ಮುಂಡಾಸು ಮೂವತ್ಮೂರು ಮೊಳ ಎಂದಿದ್ದ.
  94. ತೆಪ್ಪಾರ ಗೌಡ ಮುಂಡಾಸು ಸುತ್ತುವುದರೊಳಗೆ ಮಂಜುಗುಣಿ ತೇರು ನೆಲೆ ನಿಂತಿತ್ತು.
  95. ಹಂಚು ಕಾಣದ ಮೂಳೆ (ಮುದುಕಿ) ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು.
  96. ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ
  97. ಕಾಶಿಗೆ ಹೋದರೆ ಕಾಸಿಗೊಂದು ಕುದುರೆ.
  98. ಅಡಿಕೆ ಕೊಯ್ಲು, ಅಗಚಯದ ಹೊತ್ತು; ಅಳುವ ಮಕ್ಕಳು, ಹೊರುವ ನೀರು; ಒದ್ದೆ ಕಟ್ಟಿಗೆ, ಒಡಕಲು ಗಡಿಗೆ; ಒದಕಲು ಎಮ್ಮೆ, ಬಡಕಲು (ಬಡಿಯುವ) ಗಂಡ ಇಷ್ಟಿದ್ದರೆ ಆ ಹೆಂಗಸಿಗೆ ಅಷ್ಟೈಶ್ವರ್ಯಕ್ಕೆ ಎಂಟೆ ಕಮ್ಮಿ.
  99. ಬಕನ ಬಾರಿ, ಮಗನ ಮದುವೆ, ಹೊಳೆಯಿಂದ ಆಚೆ ಪರಾನ್ನ.

Read More Kannada Quotes Here

We hope you enjoyed reading above Proverbs in Kannada- ಕನ್ನಡ ಗಾದೆಗಳು ಗಾದೆ ಮಾತುಗಳು – Kannada Gaadegalu.