Abdul Kalam Quotes in Kannada – ಅಬ್ದುಲ್ ಕಲಾಂರ ನುಡಿಮುತ್ತುಗಳು

Here is the list of abdul kalam quotes in kannada. ಅಬ್ದುಲ್ ಕಲಾಂ ಅವರು ಭಾರತೀಯ ಅಂತರಿಕ್ಷಯಾನ ವಿಜ್ಞಾನಿ ಮತ್ತು ರಾಜನೀತಿಜ್ಞರಾಗಿದ್ದರು, ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಹುಟ್ಟಿ ಬೆಳೆದರು ಮತ್ತು ಭೌತಶಾಸ್ತ್ರ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅವರು ನಮ್ಮ ಜೀವನದಲ್ಲಿ ಹೇಗೆ ಯಶಸ್ಸು ಪಡೆಯಬಹುದು ಮತ್ತು ನಮ್ಮ ಕನಸುಗಳನ್ನು ಹೇಗೆ ನನಸಾಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಹಲವು ನುಡಿಮುತ್ತುಗಳನ್ನು ಹೇಳಿದ್ದಾರೆ, ಮುಂದೆ ಓದಿ.

#1. Abdul Kalam Quotes in Kannada

ಮನುಷ್ಯನಿಗೆ ಜೀವನದಲ್ಲಿ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಅವು ಬೇಕಾಗುತ್ತವೆ

ಸೋಲು ಯಶಸ್ಸಿನ ಮೊದಲ ಮೆಟ್ಟಿಲು.

ನೀವು ನಿಮ್ಮ ಗುರಿ ತಲುಪಬೇಕಾದರೆ ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು.

ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ.

ಸಾಧಿಸೆ ಸಾಧಿಸುತ್ತೇನೆ ಎಂಬ ಕಿಚ್ಚಿನ ಮನಸ್ಸಿನ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು

ಮಹಾನ ಕನಸುಗಾರರ ಕನಸುಗಳು ಯಾವಾಗಲೂ ನನಸಾಗುತ್ತವೆ…

Abdul Kalam Quotes in Kannada

 

#2. Positive Abdul Kalam Quotes in Kannada

ಅತಿಯಾದ ಸಂತಸದಿಂದ ಇಲ್ಲವೇ ಆಳವಾದ ದುಃಖದಿಂದ ಮಾತ್ರ ಕವನ ಕುಡಿಯೊಡೆಯುತ್ತದೆ.

ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ.

ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ.

ದೊಡ್ಡ ಗುರಿಯನ್ನು ಹೊಂದುವುದು, ನಿರಂತರವಾಗಿ ಜ್ಞಾನವನ್ನು ಪಡೆದುಕೊಳ್ಳುವುದು, ಪರಿಶ್ರಮ ಪಡುವುದು, ತಾಳ್ಮೆಯಿಂದಿರುವುದು ಈ ನಾಲ್ಕು ವಿಷಯಗಳನ್ನು ಅನುಸರಿಸಿದರೆ ನೀವು ಏನನ್ನಾದರೂ ಸಾಧಿಸಬಹುದು

ಸದಾಕಾಲ ಕ್ರಿಯಾಶೀಲರಾಗಿರಿ. ನಿಮ್ಮ ಜವಾಬ್ದಾರಿಗಳನ್ನು ನೀವೇ ಹೊತ್ತುಕೊಳ್ಳಿ. ನಿಮ್ಮ ಕನಸುಗಳಿಗಾಗಿ ಕೆಲಸ ಮಾಡಿ. ಇಲ್ಲವಾದರೆ ನೀವು ನಿಮ್ಮ ಅದೃಷ್ಟವನ್ನು ಬೇರೆಯವರಿಗೆ ಶರಣಾಗಿಸುತ್ತೀರಿ.

ನಿಮ್ಮ ಪ್ರಯತ್ನವಿಲ್ಲದೆ ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ. ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ ನೀವು ವಿಫಲರಾಗಲು ಸಾಧ್ಯವಿಲ್ಲ…

ಬರೀ ಯಶಸ್ಸಿನ ಕಥೆಗಳನ್ನಷ್ಟೇ ಓದಬೇಡಿ. ಯಶಸ್ಸಿನ ಕಥೆಗಳಿಂದ ನಿಮಗೆ ಸಂದೇಶಗಳಷ್ಟೇ ಸಿಗುತ್ತವೆ. ಸೋಲಿನ ಕಥೆಗಳನ್ನು ಓದಿ. ನಿಮಗೆ ಯಶಸ್ವಿಯಾಗಲು ಕೆಲವು ಉತ್ತಮ ಐಡಿಯಾಗಳು ಸಿಗುತ್ತವೆ…

ನಿಮ್ಮ ಕೆಲಸವನ್ನು ಪ್ರೀತಿಸಿ. ಆದರೆ ನಿಮ್ಮ ಕಂಪನಿಯನ್ನು ಅತಿಯಾಗಿ ಪ್ರೀತಿಸಬೇಡಿ. ಏಕೆಂದರೆ ಯಾವಾಗ ನಿಮ್ಮ ಕಂಪನಿ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೆ ಎಂಬುದು ಯಾರಿಗೆ ಗೊತ್ತು…??

ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಿಮ್ಮಿಂದ ನಿಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತ ಬದಲಾಯಿಸುತ್ತವೆ.

Watch the below video – Abdul Kalam thoughts in Kannada

Read More Kannada Quotes here