50 Kannada Life Quotes Text – ಮನುಷ್ಯನ ಜೀವನದ ಜ್ಞಾನ ನುಡಿ, ಒಮ್ಮೆ ಓದಿ.

Here is list of Kannada life quotes text.

ಜೀವನದ ರಹಸ್ಯವನ್ನು ತಿಳಿದುಕೊಳ್ಳಲು ಮತ್ತು ಜೀವನದಲ್ಲಿ ಸಂತೋಷವನ್ನು ತರಲು, ನಿಮ್ಮ ಮಾನವ ಜೀವನದಲ್ಲಿ ಶಾಂತಿಯನ್ನು ತುಂಬಲು ಮತ್ತು ಮಾನವ ಜೀವನದಲ್ಲಿನ ಕಷ್ಟಗಳನ್ನು ಹೋಗಲಾಡಿಸಲು, ಮಾನವ ಜೀವನದಲ್ಲಿ ಪ್ರೇರಣೆಗಾಗಿ, ನಿಮ್ಮ ಜೀವನಕ್ಕೆ ನೀವು ಹೊಸ ಶಕ್ತಿಯನ್ನು ನೀಡಬೇಕಾಗಿದೆ. ನಿಮ್ಮ ಮನಸ್ಸು ವಾಸ್ತವ ಏನು ಮತ್ತು ನಾವು ಹೇಗೆ ಸಂತೋಷವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆದ್ದರಿಂದ ಇಂದು ನಮ್ಮ ಲೇಖನದ ಮೂಲಕ ನಾವು ನಿಮ್ಮೊಂದಿಗೆ ನಿಮ್ಮೆಲ್ಲರೊಂದಿಗಿನ ಜೀವನದ ಕೆಲವು ಪ್ರಮುಖ ಮುದ್ದಾದ ಸ್ಕೋರ್‌ಗಳನ್ನು ಹಂಚಿಕೊಳ್ಳುತ್ತಿದ್ದೇವೆ, ಅದು ನಿಮ್ಮ ಜೀವನದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಸಂತೋಷವಾಗಿರಬಹುದು.

Kannada Life Quotes Text

“ಜಾರುವ ಕಣ್ಣೀರಿನ ಹನಿಯು ಭಾರವಿಲ್ಲದಿರಬಹುದು, ಆದರೆ ಅದರಲ್ಲಿ ಅಡಗಿರುವ ನೋವು ಸಾಕಷ್ಟು ಭಾರವಿರುತ್ತದೆ..!!”

ಯಾರು ಏನೇ ಯೋಜನೆ ರೂಪಿಸಿಕೊಂಡಿದ್ದರೂ ಅಂತಿಮ ನಿರ್ಧಾರ ಮಾತ್ರ ಪರಮಾತ್ಮನದ್ದೆ..!!

“ಜಗತ್ತಿನಲ್ಲಿ ಎಂಥವರೇ ಆಗಿರಲಿ ರೋಗ , ದುಃಖ , ಮುಪ್ಪು, ಮತ್ತು ಸಾವು, ಈ ನಾಲ್ಕರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ..! ಇದು ತತ್ವಜ್ಞಾನವಲ್ಲ ಪ್ರಕೃತಿ ಸತ್ಯ.”

ಸತ್ಯವನ್ನು ಅರಿತವರು ದುರಾಸಿಗಳಾಗುವುದಿಲ್ಲ, ದುರಹಂಕಾರಿಗಳಾಗುವುದಿಲ್ಲ, ಸ್ವಾರ್ಥಿಗಳಾಗುದಿಲ್ಲ, ಕ್ರೂರಿಗಳಾಗುವುದಿಲ್ಲ ಮತ್ತು ಕ್ರೋಧದಿಂದ ಯಾರನ್ನು ಯಾರೂ ದ್ವೇಷಿಸುವುದಿಲ್ಲ ..!!

“ಬಯಸಿದ್ದನ್ನು ಪಡೆಯಬೇಕೆನ್ನುವ ಹಠ ಇರಬೇಕು ಆದರೆ ಮತ್ತೊಬ್ಬರಿಂದ ಕಿತ್ತುಕೊಂಡು ಬದುಕುವ ಚಟ ಇರಬಾರದು . ಬದುಕಿನಲ್ಲಿ ಹಠ ಇರಲಿ ಆದರೆ ಯಾರನ್ನು ತುಳಿದು ಬದುಕುವ ಮನಸ್ಥಿತಿ ಬೇಡ .

Kannada Life Motivational Quotes

1 ) ” ಸ್ನೇಹ , ಸೌಜನ್ಯದಿಂದ ಮನುಷ್ಯನನ್ನು ಗೆಲ್ಲಬಹುದೇ ಹೊರತು ಬರಿಯ ಶಕ್ತಿಯಿಂದಲ್ಲ ” – ಅರಿಸ್ಟಾಟಲ್.

2 ) “ ತೆರೆದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳಬೇಕು , ನಮಗೆ ಅಗತ್ಯವೆನಿಸಿದ್ದನ್ನು ಮಾತ್ರ ಉಳಿಸಿಕೊಳ್ಳಬೇಕು -ಜೆ.ಜೆ. ಗ್ರೀನ್ .

3 ) “ ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು , ನಂಬದ ಮೇಲೆ ಪರೀಕ್ಷಿಸಬಾರದು” – ತಿರುವಳ್ಳವರ್.

4 ) ” ನಿನ್ನೆಯ ನೆನಪಲ್ಲಿ ಇಂದು ಜೀವಿಸಿದರೂ ನಾಳಿನ ಭರವಸೆಗಾಗಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಬಾರದು ” -ಐನ್‌ಸ್ಟೀನ್ .

5 ) “ ಬದುಕು ಎಂಬುದು ಹತ್ತಿಯಿದ್ದಂತೆ ಅದನ್ನು ಸಂತೋಷವೆಂಬ ಗಾಳಿಯಲ್ಲಿ ಊದಿ ಆದರೆ ಅದನ್ನು ದುಃಖವೆಂಬ ನೀರಿನಲ್ಲಿ ಅದ್ದಬೇಡಿ ” – ಕುವೆಂಪು

6 ) “ ನಾಳೆಯೇ ಸಾಯಬಹುದೆಂಬಂತೆ ಜೀವಿಸು , ಯಾವಾಗಲೂ ಜೀವಿಸುತ್ತೇನೆ ಎಂಬಂತೆ ಕಲಿಕೆಯನ್ನು ಮಾಡು ” – ಮಹಾತ್ಮಗಾಂಧಿ .

7 ) “ ಶಕ್ತಿಯ ಜೀವನ ದೌರ್ಬಲ್ಯವೇ ಮರಣ ” – ಸ್ವಾಮಿ ವಿವೇಕಾನಂದ

8 ) ” ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ ” – ಸ್ವಾಮಿ ವಿವೇಕಾನಂದ .

9 ) “ ಮನುಷ್ಯ ಉರಿಯುವ ದೀಪದಂತೆ ಆಸಕ್ತಿ ಅದಕ್ಕೆ ಹಾಕುವ ಎಣ್ಣೆಯಂತೆ ” – ಎ.ಪಿ.ಜೆ.ಅಬ್ದುಲ್ ಕಲಾಮ .

10 ) ” ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ ” – ಸ್ವಾಮಿ ವಿವೇಕಾನಂದ .

11 ) ಸಮುದ್ರದ ದೃಶ್ಯ ಆನಂದಮಯ , ಆದರೆ ದಡದ ಮೇಲಿಂದ ನೋಡುವವರಿಗೇ ಹೊರತೂ ಮುಳುಗುವವರಿಗಲ್ಲ ” -ವಿನೋಬಾ ಬಾವೆ

12 ) “ ನಮ್ಮಲ್ಲಿ ನಮಗೆ ಶ್ರದ್ಧೆಯಿರಲಿ , ಸಕಲ ಶಕ್ತಿಯೂ ಅಡಗಿದೆ ನಮ್ಮಲ್ಲಿ ಇದನ್ನರಿತು ಭಾವಿಸುತ್ತಾ ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ ನಮ್ಮವ್ಯಕ್ತಿತ್ವದಲ್ಲಿ ಹೇಳಿಕೊಳ್ಳಿ ” -ಸ್ವಾಮಿ ವಿವೇಕಾನಂದ

13 ) ” ಇತರರಿಗೆ ಕೇಡು ಬಗೆಯಬೇಡಿ , ಇತರರ ಮೇಲೆ ಕಾಲು ಇಡಬೇಡಿ . ನಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿ ” – ಸ್ವಾಮಿ ವಿವೇಕಾನಂದ

14 ) ” ಜಗತ್ತಿನಲ್ಲಿ ಮೂರು ವಸ್ತುಗಳನ್ನು ಮಡಚಿಡಲಾಗದು ಅವೆಂದರೆಸೂರ್ಯ , ಚಂದ್ರ ಮತ್ತು ಸತ್ಯ ” – ಗೌತಮ ಬುದ್ಧ

15 ) “ ಮನವೇ ದೇಗುಲ ಮತ್ತೆ ಇಳೆಯೇ ಗುಡಿಯೆಂದೆ , ಬಾಳನುಳಿದಿನ್ನಾವ ದೇವನಲ್ಲೆಂದೆ ” -ವಿ.ಕೃ.ಗೋಕಾಕ್ .

16 ) ” ಪ್ರೀತಿಸುವವರನ್ನು ಪಡೆಯುವುದು ಕಠಿಣ , ಅದಕ್ಕೂ ಕಠಿಣ ಕೆಡದಂತೆ ಪ್ರೀತಿಯ ಕಾಯ್ದುಕೊಂಡು ಹೋಗುವುದು ” – ಸಿದ್ದಯ್ಯ ಪುರಾಣಿಕ .

17 ) ” ಪ್ರೇಮ ಬೆಂಕಿಯು ಎಲ್ಲವನ್ನೂ ಪವಿತ್ರವಾಗಿಸುತ್ತದೆ ” – ಡಾ || ರಾಧಾಕೃಷ್ಣನ್ .

18 ) ” ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ ” -ಮದರ್‌ ತೆರೇಸಾ .

19 ) ” ಕಳವು ಮಾಡಲೂ ಅವಕಾಶ ಸಿಗುವವರೆಲ್ಲರೂ ಅನಿವಾರ್ಯ ಪ್ರಾಮಾಣಿಕರು ” – ಮುನಿಶ್ರೀ ತರುಣ್ ಸಾಗರ್

20 ) “ ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ ಹಾಗೂ ಚಾರಿತ್ರ ಶುದ್ಧಿಯಲ್ಲಿ ” . ಸ್ವಾಮಿ ವಿವೇಕಾನಂದ

21 ) ” ಪ್ರೀತಿ ಇದ್ದಲ್ಲಿ ನಂಬಿಕೆ ಇರಲೇ ಬೇಕೆಂದಿಲ್ಲ ಆದರೆ ನಂಬಿಕೆ ಇದ್ದಲ್ಲ ಪ್ರೀತಿ ಇದ್ದೇ ಇರುವುದು ” . ಸಂತ ಕಬೀರ .

22 ) ” ಗಾಳಿಯಂತೆ ನೀನು ಜೀವನದ ಎಲ್ಲಾ ಭಾಗಗಳಲ್ಲೂ ಪ್ರವೇಶ ಪಡೆ ಆದರೆ ಅಂಟಿಕೊಳ್ಳಬೇಡ ” – ಅವಧೂತ ವೆಂಕಟಾಚಲ ಸದ್ಗುರು

23 ) ” ತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ ಪ್ರೀತಿಯೇ ದಿವ್ಯಾಷಧ ” . -ಗೌತಮ ಬುದ್ಧ .

24 ) ” ನಿಮ್ಮ ಹಾದಿಯಲ್ಲಿ ಮುಳ್ಳು ಚೆಲ್ಲಿದವರ ಹಾದಿಯಲ್ಲಿ ಹೂ ಚೆಲ್ಲಿ ” – ಸ್ವಾಮಿ ವಿವೇಕಾನಂದ .

25) “ ಮಾತುಗಳು ಪರಸ್ಪರ ಬೇರ್ಪಡಿಸಲು ಇರುವುದಲ್ಲ , ಪರಸ್ಪರ ಸೇರಿಸಲು ಇರುವುದಾಗಿದೆ ” . ಮಹಾತ್ಮ ಗಾಂಧೀಜಿ .

26 ) ” ಶಿಸ್ತೇ ಶಿಕ್ಷಣದ ತಳಹದಿ ” . ಡಾ || ಬಿ.ಆರ್.ಅಂಬೇಡ್ಕರ್ .

27 ) “ ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ , ರೇಗುವ ದನಿಗೂ ರಾಗವು ಒಲಿಯಲಿ ಮೂಡಲ ಮಧುರಾಲಾಪ ” . – ಲಕ್ಷ್ಮೀನಾರಾಯಣ ಭಟ್ .

28 ) “ ಒಂದು ಗ್ರಂಥಾಲಯದ ಎಲ್ಲಾ ತಿಳುವಳಿಕೆಗಳನ್ನು ತಲೆಯಲ್ಲಿರಿಸಿ ಅಹಂಕರಿಸಿ ನಡೆಯುವ ಒಬ್ಬ ವ್ಯಕ್ತಿಗಿಂತ ಒಳ್ಳೆಯ ಸ್ವಭಾವ ಮತ್ತು ನಡವಳಿಕೆಯಿರುವ ಒಬ್ಬ ಸಾಧಾರಣ ವ್ಯಕ್ತಿ ಮೇಲು ” . – ಸ್ವಾಮಿ ವಿವೇಕಾನಂದ .

29 ) “ ಶರೀರ ಕೃಷಿ ಭೂಮಿಯಾಗಿದೆ . ಮನಸ್ಸು ಕೃಷಿಯಾಗಿದೆ . ಪಾಪ ಪುಣ್ಯಗಳು ಬೀಜಗಳಾಗಿವೆ . ಯಾವ ಬೀಜವನ್ನು ಬಿತ್ತುತ್ತಾನೋ ಅದನ್ನು ಕೊಯ್ಯುತ್ತಾನೆ ” . – ತುಳಸೀದಾಸರು .

30 ) ” ಪ್ರಾಣಿ ಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ , ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ ” . — ಸ್ವಾಮಿ ವಿವೇಕಾನಂದ .

31 ) “ ಹೆಸರಲ್ಲೇನಿದೆ ? ಗುಲಾಬಿಯೆಂದು ಕರೆಯುವ ಹೂವನ್ನು ಯಾವ ಹೆಸರಿನಿಂದ ಕರೆದರೂ ಅದರ ಪರಿಮಳದಲ್ಲಿ ಯಾವ ವ್ಯತ್ಯಾಸವೂ : ಇಲ್ಲ ” . -ಷೇಕ್ಸ್ ಪಿಯರ್ .

32 ) ” ಎಲ್ಲಿಯ ತನಕ ನಿಮ್ಮ ಯೋಚನೆಗಳು ಒಳ್ಳೆಯದಿರುತ್ತವೆಯೋ ಅಲ್ಲಿಯ ತನಕ ಶ್ರೇಷ್ಠತೆಯ ಫಲ ನಿಮ್ಮದಾಗುತ್ತದೆ ” .

33 ) ” ಜೀವನದ ಮಾಧುರ್ಯ ಸೌಂದರ್ಯ ಬಯಸುವೆಡೆ , ಜೀವನದ ಕಹಿ ವಿಕೃತಿಗೆ ಅಂಜಬೇಕೆ ” . ಸ್ವಾಮಿ ವಿವೇಕಾನಂದ .

34 ) ” ಕಷ್ಟಗಳು ಚಾಕುವಿನಂತೆ , ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ . ಕೊನೆ ಹಿಡಿದರೆ ಕತ್ತರಿಸುತ್ತದೆ ” . ಜೇಮ್ಸ್ ರಸಲ್ ಲೋವಲ್ .

35 ) “ ನೀನು ಏನಾದರೂ ಆಗು ಮೊದಲು ಮಾನವನಾಗು ” . ಕವಿವಾಣಿ

36 ) ” ಜನನ ಮರಣಗಳ ನಡುವಿನ ದಾರಿಯೇ ಜೀವನ ” .

37 ) “ ನಮ್ಮಲ್ಲಿ ಮಗೆ ಶ್ರದ್ಧೆಯಿರಲಿ , ಮಹತ್ತರ ಶ್ರದ್ಧೆಯೇ ಮಹಾಕಾರ್ಯಗಳ ಉಗಮಸ್ಥಾನ ” . – ಸ್ವಾಮಿ ವಿವೇಕಾನಂದ .

38 ) “ ಯಶಸ್ಸು ಉರಿಯುವ ದೀಪವಾದರೆ ಅಭ್ಯಾಸ ಅದನ್ನು ಉರಿಸುವ ಎಣ್ಣೆ ” .

39 ) ” ಇರುವೆಗಳು ಸಂಗ್ರಹಿಸಿದ ಕಾಳು , ಜೇನುನೋಣಗಳು ಕೂಡಿಟ್ಟ ಜೇನುತುಪ್ಪ , ಜಿಪುಣನ ಸಂಪತ್ತು ಇವೆಲ್ಲಾ ಸಂಪೂರ್ಣ ನಾಶವಾಗುವವು ” – ಸುಭಾಷಿತ .

40 ) “ ಖಾಲಿ ಜೇಬು , ಹಸಿದ ಹೊಟ್ಟೆ , ಒಡೆದ ಹೃದಯ ಈ ಮೂರು ಜೀವನದಲ್ಲಿ ಅತ್ಯುತ್ತಮ ಪಾಠವನ್ನು ಕಲಿಸುತ್ತದೆ ” .

41 ) ಯಾವ ದೇಶದ ಪ್ರಧಾನಮಂತ್ರಿ ಗುಡಿಸಲಲ್ಲಿ ವಾಸಿಸುತ್ತಾರೋ ಆ ದೇಶದ ಪ್ರಜೆಗಳೆಲ್ಲಾ ಭವನಗಳಲ್ಲಿರುತ್ತಾರೆ . ಯಾವ ದೇಶದ ಪ್ರಧಾನಮಂತ್ರಿಯು ಭವ್ಯವಾದ ಭವನದ ನಿವಾಸಿಯಾಗಿರುತ್ತಾರೋ ಆ ದೇಶದ ಪ್ರಜೆಗಳು ಗುಡಿಸಲಿನ ನಿವಾಸಿಗಳಾಗಿರುತ್ತಾರೆ . – ಚಾಣಕ್ಯ .

42 ) ” ಜ್ಞಾನವೆಂಬ ಖಜಾನೆಗೆ ಅಭ್ಯಾಸವೇ ಕೀಲಿಕೈ ” . ಸ್ವಾಮಿ ವಿವೇಕಾನಂದ .

43 ) “ ಕೋಪ ವಿವೇಕವನ್ನು ನಾಶಗೊಳಿಸಿದರೆ ತಾಳ್ಮೆ ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ .

44 ) “ ಬದುಕಿನಲ್ಲಿ ಸಂಭವಿಸುವುದು ಕೇವಲ ಹತ್ತರಷ್ಟು ಮಾತ್ರ ಉಳಿದ ತೊಂಬತ್ತರಷ್ಟು ನಾವು ಅದಕ್ಕೆ ನೀಡುವ ಪ್ರತಿಸ್ಪಂದನೆ ” .

45 ) “ ಕೋಪದಿಂದಾಗುವ ಮೂರು ಅನಾಹುತಗಳೆಂದರೆ ಕೆಟ್ಟ ಮಾತು , ಧನಹಾನಿ , ದುಷ್ಟ ಶಾಸನ ” . ಕೌಟಿಲ್ಯ

46 ) “ ಮನಸ್ಸು ಯಾವಾಗಲೂ ಚುರುಕಾಗಿದ್ದರೆ ಅದು ಸಂತೋಷಕ್ಕೆ ಕಾರಣವಾಗಲಿದೆ ” . ಬಿ.ಜೆಫರ್ಸನ್ .

47 ) “ ಅನುಮಾನಗಳು ಮನಸ್ಸಿನ ಒಳ ಮನೆಯನ್ನು ಹೊಕ್ಕರೆ ಅರೆ ಕ್ಷಣ ಪ್ರಾರ್ಥನೆಗೆ ಮೊರೆಹೋಗಿ ”

48 ) “ ಸಾಯಲು ಹತ್ತಾರು ದಾರಿಗಳಿವೆ , ಬದುಕಲು ಇರುವುದು ಒಂದೇ ದಾರಿ ಅದೇ “ ಆತ್ಮವಿಶ್ವಾಸ ”

49 ) “ ನಿಷ್ಠೆಯಿಂದ ದುಡಿಯುವವರನ್ನು ಕಂಡರೆ ಬಡತನ ಓಡಿ ಹೋಗುತ್ತದೆ ” ವಾಲ್ಟೇರ್ .

50 ) ” ನೀವು ಏನನ್ನು ಸಾಧಿಸಬೇಕೆಂದು ಬಯಸುತ್ತೀರೋ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿ ಅದರ ಪ್ರತಿಫಲವನ್ನು ಬೇಗನೆ ಪಡೆಯುತ್ತೀರಿ ” . – ಅಲೆಗ್ಸಾಂಡರ್

Watch Below Kannada Life Motivational Videos