ಶ್ರೀ ಕೃಷ್ಣನ ಪ್ರೇರಣಾದಾಯಕ ನುಡಿಗಳು – Krishna Quotes in Kannada

Here is the list of Krishna Quotes in Kannada. ಭಗವಾನ್ ಶ್ರೀ ಕೃಷ್ಣ ಹೇಳಿರುವ ಕೆಲವು ನುಡಿಮುತ್ತುಗಳು ನಮ್ಮ ಜೀವನದಲ್ಲಿ ಚೈತನ್ಯವನ್ನು ಮೂಡಿಸುತ್ತವೆ. ಅದರಲ್ಲಿ ಕೆಲವು ಕೆಳಗಿನಂತಿವೆ, ಮುಂದೆ ಓದಿ.

#1. Sri Krishna Quotes in Kannada

 1. ಸಂತೋಷ ಎಂಬುದು ನಮ್ಮದೇ ಮನಸ್ಥಿತಿ ಆಗಿದೆ, ಅದು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
 2. ಬದಲಾವಣೆಗಳಿಗೆ ಹೆದರಬೇಡಿ, ಬದಲಾವಣೆ ನಿಸರ್ಗದ ನಿಯಮವಾಗಿದೆ ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ದರಾಗಿರಬೇಕು, ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ ನೀವು ಶ್ರೀಮಂತರಾಗಬಹುದು ಅಥವಾ ಭಿಕ್ಷುಕರಾಗಬಹುದು.
 3. ಇಂದ್ರಿಯಗಳು ಮೋಹ, ದ್ವೇಷಗಳತ್ತ ನಮ್ಮನ್ನು ಪ್ರಚೋದಿಸಬಹುದು, ಈ ವ್ಯಾಮೋಹ ದ್ವೇಷದಿಂದ ನಮ್ಮೆಲ್ಲ ಯೋಚನೆಗಳು ಒಂದೇ ವ್ಯಕ್ತಿಯ ಸುತ್ತಲಿರುತ್ತವೆ, ನಮ್ಮ ಬೆಳವಣಿಗೆಗೆ ಇದು ಮಾರಕ.
 4. ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು, ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.
 5. ಬುದ್ಧಿಯಲ್ಲಿ ಸ್ಥಿರತೆ ಇದ್ದರೆ ಸುಖ ಬಂದಾಗ ಹಿಗ್ಗಲ್ಲ, ದುಃಖಕ್ಕೆ ಕುಗ್ಗೋದಿಲ್ಲ, ಏಕೆಂದರೆ ಇವೆರಡೂ ಕ್ಷಣಿಕವೆಂದು ಅವರಿಗೆ ತಿಳಿದಿದೆ.
 6. ನೀವು ಅನಗತ್ಯವಾಗಿ ಚಿಂತಿಸುತ್ತಿರಿ? ಯಾರಿಗಾಗಿಯೋ ಏಕೆ ಹೆದರುತ್ತೀರಿ? ಯಾರು ನಿಮ್ಮನ್ನು ಕೊಲ್ಲಲು ಸಾಧ್ಯ? ಅಂತಿಮವಾಗಿ ಆತ್ಮವು ಹುಟ್ಟುತ್ತದೆ ಅಥವಾ ಸಾಯುತ್ತದೆ ಅಷ್ಟೇ ಅಲ್ಲವೇ. ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, ಅದುವೇ ಕಾಮ, ಕೋಪ ಮತ್ತು ದುರಾಸೆ.
 7. ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.
 8. ಜೀವನದಲ್ಲಿ ಆಸೆ-ದುರಾಸೆಗಳನ್ನು ಕಡಿಮೆ ಮಾಡುವುದೇ ಸಂತೋಷದ ಕಲಿಕೈ.
 9. ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.
 10. ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ.
ಶ್ರೀ ಕೃಷ್ಣನ ಸಂದೇಶಗಳು

#2. Krishna Quotes in Kannada Text

 1. ಎಲ್ಲರ ಜೊತೆಯಲ್ಲಿ ಇರು, ಎಲ್ಲರಂತೆ ನಗುತ್ತಾ ಇರು, ಅಷ್ಟು ಬಿಟ್ಟರೆ ಎಲ್ಲರೂ ನಮ್ಮವರೆಂದು ಹೆಮ್ಮೆ ಪಡಬೇಡ, ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ.
 2. ತಪ್ಪು ಮಾಡುವಾಗ ಮನುಷ್ಯನಿಗೆ ಅರಿವಿರುವುದಿಲ್ಲ, ಆದ್ರೆ ಮೋಸ ಮಾಡುವಾಗ ಅರಿವಿರುತ್ತದೆ, ಹಾಗಾಗಿ ತಪ್ಪನ್ನು ಕ್ಷಮಿಸಬಹುದು.
 3. ಸಿಗುತ್ತಾರೆ ಎಂದು ಇಷ್ಟಪಡುವುದು ನಂಬಿಕೆ, ಸಿಗಲ್ಲ ಅಂತ ಗೊತ್ತಿದ್ರೂ ಇಷ್ಟಪಡುವುದು ನಿಜವಾದ ಪ್ರೀತಿ.
 4. ಮೀರಾ ಬಯಸಿದ್ದು ಕೃಷ್ಣನ, ಕೃಷ್ಣ ಬಯಸಿದ್ದು ರಾಧೆನಾ, ಆದರೆ ಕೃಷ್ಣ ಸಿಕ್ಕಿದ್ದು ರುಕ್ಮಿಣಿಗೆ, ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲ, ಇನ್ನು ನಮ್ಮದು ಯಾವ ಲೆಕ್ಕ.
 5. ದೇವರು ತಡ ಮಾಡಿದರು ನ್ಯಾಯ ಮಾಡುತ್ತಾನೆ, ಆದರೆ ಅನ್ಯಾಯ ಮಾಡುವುದಿಲ್ಲ, ತಡ ಆಗುವುದರ ಹಿಂದೆ “ಅದ್ಭುತಗಳು” ನಡೆಯುತ್ತವೆ, ಕಾದು ನೋಡಬೇಕು ಅಷ್ಟೇ.
 6. ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನ ಎಂಬುದು ಅಧಿಕವಾದರೆ ಹಣೆಬರಹವೂ ಕೂಡ ಶಿರಬಾಗುತ್ತದೆ, ಇದು ನಿಶ್ಚಿತ.
 7. ನೀವು ನೀವಾಗೇ ಇರಿ, ನಿಮ್ಮನ್ನು ನಿಜವಾಗಿ ಇಷ್ಟಪಡುವವರು ನೀವು ಹೇಗಿದ್ದರೂ ನಿಮ್ಮನ್ನು ಇಷ್ಟಪಡುತ್ತಾರೆ.
 8. ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು, ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ, ನಿರ್ಣಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
 9. ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಪಾತಾಳಕ್ಕೆ ಬಿದ್ದು ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ.
 10. ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ, ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.
ಭಗವದ್ಗೀತೆ ಶ್ರೀ ಕೃಷ್ಣನ ನುಡಿಗಳು

#3. Radha Krishna Quotes in Kannada

 1. ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ ಅದರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡಿ.
 2. ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, ಏಕೆಂದರೆ ಅಲ್ಲಿ ನಾನು, ನನ್ನಿಂದಲೇ ಎಂದು ಹೇಳಿದ ಎಷ್ಟು ಜನ ಮಣ್ಣಾಗಿರುವರು ಕಾಣಿ ಸಿಗುತ್ತಾರೆ.
 3. ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಸ್ನೇಹಿ, ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ ಮನಸ್ಸೇ ಅತ್ಯಂತ ದೊಡ್ಡ ಶತ್ರು
 4. ನಿನ್ನ ತಪ್ಪು ಇಲ್ಲದೆ ಯಾರು ನಿನ್ನನ್ನು ನಿಂದಿಸಿದರೆ ಪ್ರತೀಕಾರ ತೀರಿಸಲು ನಿನ್ನ ಕೈಯಲ್ಲಿ ಆಗದಿದ್ದರೂ ಕಾಲ ಅವರನ್ನು ತಪ್ಪದೇ ಶಿಕ್ಷಿಸುತ್ತದೆ, ಏಕೆಂದರೆ ಅವರು ಮಾಡಿದ ಕರ್ಮಗಳಿಗೆ ಅವರೇ ಶಿಕ್ಷೆ ಅನುಭವಿಸಬೇಕು.
 5. ಮನಸ್ಸಿಟ್ಟು ಕಲಿತ ಅಕ್ಷರ, ಮೈಬಗ್ಗಿಸಿ ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟದಿಂದ ಮಾಡುವ ದೈವಭಕ್ತಿ, ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲ.
 6. ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನನಗೆ ಸಿಕ್ಕೆ ತಿರುತ್ತದೆ, ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದರೂ ಸಿಗಲಾರದು, ಚಿಂತೆ ಬಿಡು ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸಿ.
 7. ಸ್ವರ್ಗದಲ್ಲಿ ಎಲ್ಲವೂ ಇದೆ ಆದರೆ ಸಾವಿಲ್ಲ, ಭಗವದ್ಗೀತೆಯಲ್ಲಿ ಎಲ್ಲವೂ ಇದೆ ಆದರೆ ಸುಳ್ಳಿಲ್ಲ, ಜಗತ್ತಿನಲ್ಲಿ ಎಲ್ಲವೂ ಇದೆ ನೆಮ್ಮದಿ ಇಲ್ಲ, ಇವತ್ತಿನ ಎಲ್ಲಾ ಮಾನವರಲ್ಲಿ ಎಲ್ಲವೂ ಇದೆ ಆದರೆ ಶಾಂತಿ ಇಲ್ಲ…ಜೈ ಶ್ರೀ ಕೃಷ್ಣ

#4. ಶ್ರೀ ಕೃಷ್ಣನ ಸಂದೇಶಗಳು

 1. ಜೀವನದಲ್ಲಿ ಯಾರಿಗೆ ಯಾವುದೇ ಲಗತ್ತುಗಳು ಇಲ್ಲವೋ ಅವರು ನಿಜವಾಗಿಯೂ ಇತರರನ್ನು ಪ್ರೀತಿಸಬಹುದು, ಏಕೆಂದರೆ ಅವರ ಪ್ರೀತಿ ಶುದ್ಧ ಮತ್ತು ದೈವಿಕವಾಗಿರುತ್ತದೆ.
 2. ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು, ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.
 3. ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, ಅದುವೇ ಕಾಮ, ಕೋಪ ಮತ್ತು ದುರಾಸೆ.
 4. ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.
 5. ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.

#5. ಭಗವದ್ಗೀತೆ ಶ್ರೀ ಕೃಷ್ಣನ ನುಡಿಗಳು

 1. ಒಳ್ಳೆಯದಕ್ಕೆ ಆಗಿದೆ.ಆಗುವುತ್ತಿರುವುದೆಲ್ಲಾ ಒಳ್ಳೆಯದಕ್ಕೆ.ಮುಂದೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತೆ.ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ.
 2. ಹುಟ್ಟಿದಾಗ ಬೆತ್ತಲೆ, ಸತ್ತಾಗಲೂ ಬೆತ್ತಲೆ.ಅಂದ್ರೆ ನಾವು ಹುಟ್ಟಿದಾಗ ಏನನ್ನೂ ತರುವುದಿಲ್ಲ.ಸತ್ತಾಗ ಕೂಡ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.
 3. ಬದಲಾವಣೆಯೇ ಜೀವನದ ನಿಯಮ.ಅಂದ್ರೆ ಯಾವುದೇ ರಾಜನಾಗಿದ್ದವನು, ಒಂದೇ ದಿನದಲ್ಲಿ ಅಥವಾ ಒಂದೇ ನಿಮಿಷದಲ್ಲಿ ಬಿಕಾರಿಯಾಗಬಹುದು.ಹಾಗಾಗಿ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ನಾವು ಒಪ್ಪಿಕೊಳ್ಳಲೇಬೇಕು.
 4. ಆತ್ಮಕ್ಕೆ ಜನನವೂ ಇಲ್ಲ, ಮರಣವೂ ಇಲ್ಲ.ಅಂದ್ರೆ ನಮ್ಮ ದೇಹ ನಶ್ವರ. ಆತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತದೆ.ಹಾಗಾಗಿ ಸಾವಿಗೆ ಭಯಪಡಬಾರದೆಂದು ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಹಾಗಾಗಿ ನಾವು ಸಾವಿಗೆ ಭಯಪಡಬಾರದು.
 5. ಕರ್ಮ ಮಾಡಿ ಫಲವನ್ನು ಬಯಸಬೇಡಿ. ಅಂದ್ರೆ ನಾವು ಮಾಡೋ ಕೆಲಸದಲ್ಲಿ ಶೃದ್ಧೆ ಇದ್ರೆ, ನಮಗೆ ಮಾಡೋ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವುದು ಇದರ ಅರ್ಥ.
 6. ಸಂದೇಹದಿಂದ ನಮಗೆ ಖುಷಿ ಸಿಗುವುದಿಲ್ಲ. ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ.
 7. ಧ್ಯಾನದಿಂದ ಮನಸ್ಸು ನಿರ್ಮಲವಾಗುದಲ್ಲದೆ, ಒಂದು ನಿರಂತರ ಜ್ಯೋತಿಯಂತೆ ಆಗುತ್ತದೆ.
 8. ಮಾನವನು ತನ್ನ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕಳ್ಳುವುದರಿಂದ ಜೀವನದಲ್ಲಿ ಗೆಲ್ಲಲೂಬಹುದು, ಸೋಲಲೂಬಹುದು. ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸಿ ನಿರ್ಧರ ತೆಗೆದುಕೊಳ್ಳಬೇಕಾಗುತ್ತದೆ.
 9. ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ.
 10. ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ.
 11. ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ.
 12. ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ.
 13. ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು.
 14. ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ.
 15. ನೀನಾರು ಎಂದು ತಿಳಿದುಕೋ.ಪ್ರಯತ್ನ ಬಿಡಬೇಡ.
 16. ದೇವರ ಧ್ಯಾನದಿಂದ ನನ್ನ ಸೇರಬಹುದು.
 17. ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ.
 18. ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು.
 19. ದೈವಿಕತ್ವಕ್ಕೆ ಬೆಲೆ ಕೊಡು.
 20. ಪರಮಾತ್ಮನೊಂದಿಗೆ ಐಕ್ಯ.
sri krishna quotes in kannada

We hope you enjoyed reading above Krishna Quotes in Kannada. Read more Kannada Quotes here