ಕನ್ನಡ ಶುಭ ನುಡಿಗಳು – ನಾವು ಯಾರಿಂದ ಏನನ್ನು ಕಲಿಯಬೇಕು.?

Here is the list of ಕನ್ನಡ ಶುಭ ನುಡಿಗಳು

#1. ಕನ್ನಡ ಶುಭ ನುಡಿಗಳು 

 • ಉತ್ಸಾಹಿಯಾಗು ಆದರೆ ದುಡಕಬೇಡ.
 • ಕರುಣೆ ತೋರಿಸು ಆದರೆ ಮೋಸ ಹೋಗಬೇಡ.
 • ಶೂರನಾಗು ಆದರೆ ಕಟುಕನಾಗಬೇಡ.
 • ದಾನಿಯಾಗು ಆದರೆ ದರಿದ್ರನಾಗಬೇಡ.
 • ತ್ಯಾಗಿಯಾಗು ಆದರೆ ಅಡವಿಗೆ ಹೋಗಬೇಡ.
 • ಉಳಿತಾಯ ಮಾಡು ಆದರೆ ಜಿಪುಣನಾಗಬೇಡ.
 • ನಮ್ರತೆ ಇರಲಿ ಆದರೆ ಗುಲಾಮನಾಗಬೇಡ.
 • ಲಾಭಗಳಿಸು ಆದರೆ ಲೋಭಿಯಾಗಬೇಡ.
 • ಸೇವೆ ಮಾಡು ಆದರೆ ಸ್ವಾರ್ಥಿಯಾಗಬೇಡ.
 • ಭಾಗ್ಯವಂತನಾಗು ಆದರೆ ಬುದ್ಧಿಹೀನನಾಗಬೇಡ.

#2. ನಮ್ಮ ಆದರ್ಶ ಮಹಿಮರು ಯಾರು? ನಾವು ಯಾರಿಂದ ಏನನ್ನು ಕಲಿಯಬೇಕು.?

 • ಮಿತ್ರತ್ವವನ್ನು ಕೃಷ್ಣ ನಿಂದ.
 • ಮರ್ಯಾದೆಯನ್ನು ಶ್ರೀ ರಾಮನಿಂದ.
 • ಬ್ರಹ್ಮ ಚರ್ಯೆಯನ್ನು ಭೀಷ್ಮಚಾರ್ಯ ರಿಂದ.
 • ಗುರುಭಕ್ತಿಯನ್ನು ಏಕಲವ್ಯನಿಂದ.
 • ದಾನವನ್ನು ಕರ್ಣನಿಂದ.
 • ಧರ್ಮವನ್ನು ಯುಧಿಷ್ಟರನಿಂದ.
 • ಭಕ್ತಿಯನ್ನು ಪ್ರಹ್ಲಾದನಿಂದ.
 • ತಪಸ್ಸನ್ನು ದ್ರುವನಿಂದ.
 • ಮಾತ ಪಿತ್ರುಗಳ ಸೇವೆಯನ್ನು ಶ್ರವಣ ಕುಮಾರನಿಂದ.
 • ಸ್ವಾಮಿ ನಿಷ್ಟೆಯನ್ನು ಶ್ರೀ ಆಂಜನೇಯ ಸ್ವಾಮಿಯಿಂದ.
 • ತ್ಯಾಗವನ್ನು ದಧೀಚಿ ಮಹರ್ಷಿ ಯಿಂದ.
 • ಪ್ರೀತಿಯನ್ನು ತಾಯಿಯಿಂದ.
 • ಆದರ್ಶವನ್ನು ತಂದೆಯಿಂದ ಕಲಿಯಬೇಕು.

#3. ಸಾರ್ಥಕ ಮನುಷ್ಯನ ಒಂಬತ್ತು ಲಕ್ಷಣಗಳು

 • ಆಸೆ- ಕೋಪ- ನಾಲಿಗೆ ಈ ಮೂರನ್ನು ಹತೋಟಿಯಲ್ಲಿಡು.
 • ವ್ಯಾಪಾರ- ಪ್ರಯಾಣ- ಮದುವೆ ಈ ಮೂರಕ್ಕೆ ಆತುರ ಬೇಡ.
 • ಬುದ್ಧಿ ಶಕ್ತಿ – ಸಾಮರ್ಥ್ಯ-ಸಂತೋಷ ಈ ಮೂರಕ್ಕೆ ಬೆಲೆ ಕೊಡು.
 • ಹಣ- ಸಮಯ- ಶಕ್ತಿ ಈ ಮೂರನ್ನು ವ್ಯರ್ಥ ಮಾಡಬೇಡ.
 • ಧರ್ಮ- ನ್ಯಾಯ- ವಿನಯ ಈ ಮೂರಕ್ಕೆ ಗೌರವ ಕೊಡು.
 • ದೇಶ- ರಾಷ್ರ ದ್ವಜ -ಗೌರವ ಈ ಮೂರಕ್ಕೆ ಹೋರಾಡು.
 • ಧೈರ್ಯ-ವಾತ್ಸಲ್ಯ-ಶಿಷ್ಟಚಾರ ಈ ಮೂರನ್ನು ಪ್ರೀತಿಸು.
 • ಅನ್ಯಾಯ- ಅಹಂಕಾರ- ಸ್ವಾಮಿ ದ್ರೋಹ ಈ ಮೂರನ್ನು ದ್ವೇಷಿಸು.
 • ಸಾವು-ದುಃಖ-ಸೋಲು ಈ ಮೂರಕ್ಕೆ ಸದಾ ಸಿದ್ದ ನಾಗಿರು.

ಶುಭ ನುಡಿಗಳು

Read More Kannada Quotes here